ನ್ಯೂಸ್ ನಾಟೌಟ್: ಪುಟಾಣಿ ಮಕ್ಕಳ ಶಾಲೆ ಎಂದೇ ಖ್ಯಾತಿ ಪಡೆದುಕೊಂಡಿರುವ ಸುಳ್ಯದ ಅಂಜಲಿ ಮೌಂಟೇಸರಿ ಶಾಲೆಯಲ್ಲಿ 79ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಿಸಲಾಯಿತು.
ನ್ಯಾಯವಾದಿ ವೆಂಕಪ್ಪ ವಕೀಲ, ಗಂಗಾಧರ್ ಪಿ ಎಸ್ , ಶುಭಕರ ಹಾಗೂ ಶಾಲೆಯ ಸಂಚಾಲಕಿ ಗೀತಾಂಜಲಿ ಟಿ.ಜಿ ಉಪಸ್ಥಿತರಿದ್ದರು. ಅಲ್ಲದೆ ಪುಟಾಣಿ ಮಕ್ಕಳಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ ಮಿಂಚಿದರು. ಶಾಲೆಯ ಸಂಚಾಲಕಿ ಗೀತಾಂಜಲಿ ಸ್ವಾಗತಿಸಿದರು. ನಿರ್ಮಲ ವಂದಿಸಿದರು. ಶಾಲೆಯ ಶಿಕ್ಷಕಿ ರೂಪ ನಿರೂಪಣೆ ಮಾಡಿದರು.