ನ್ಯೂಸ್ ನಾಟೌಟ್: ಸುಳ್ಯ ಬಸ್ ನಿಲ್ದಾಣದ ಬಳಿ ಮಲಗಿದ್ದ ಅಪರಿಚಿತ ವ್ಯಕ್ತಿಯ ಮೇಲೆ ವಾಹನವೊಂದು ಹರಿದಿದೆ. ಡಿಕ್ಕಿಯ ರಭಸಕ್ಕೆ ವ್ಯಕ್ತಿಯ ಕೈಗೆ ಗಂಭೀರ ಗಾಯವಾಗಿದೆ. ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ಕೈ ಬೆರಳಿಗೆ ಗಾಯವಾಗಿದೆ.
ಗಾಯಾಳು ಸುಳ್ಯದ ಸುತ್ತಮುತ್ತ ತಿರುಗಾಟ ನಡೆಸುತ್ತಿರುತ್ತಾನೆ, ಈತನ ಬಂಧುಗಳು ಯಾರು ಅನ್ನುವುದು ಕೂಡ ಗೊತ್ತಿಲ್ಲ. ಬಸ್ ಸ್ಟ್ಯಾಂಡ್ ನಲ್ಲೇ ಹೆಚ್ಚು ಇರುತ್ತಾನೆ. ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದುಕೊಂಡು ಹೋಗಬೇಕಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.