ಕರಾವಳಿಕ್ರೈಂಸುಳ್ಯ

ಸುಳ್ಯ: ಎಲೆಕ್ಟ್ರಿಷಿಯನ್ ಸತ್ಯಣ್ಣನ ಪಾರ್ಥೀವ ಶರೀರ ಹಳೆಗೇಟಿಗೆ ಆಗಮನ, ಶಾಪ್ ಮುಂದೆ ಮೃತದೇಹ ಕಂಡು ಕಣ್ಣೀರಾದ ಬಂಧು ಬಳಗ

258

ನ್ಯೂಸ್ ನಾಟೌಟ್: ಎಲ್ಲರೊಂದಿಗೆ ಚೆನ್ನಾಗಿ ಬೆರೆತು ಇದ್ದಕ್ಕಿದ್ದ ಹಾಗೆ ದೇವರ ಪಾದ ಸೇರಿದ ಸುಳ್ಯದ ಹಳೆಗೇಟಿನ ಎಲೆಕ್ಟ್ರಿಷಿಯನ್ ಸತ್ಯಣ್ಣ ಅವರ ಪಾರ್ಥೀವ ಶರೀರ ಇದೀಗ (ಜೂ.14) ಸುಳ್ಯಕ್ಕೆ ಆಗಮಿಸಿದೆ.

ಪ್ರಗತಿ ಆಂಬ್ಯುಲೆನ್ಸ್ ನಲ್ಲಿ ಸುಳ್ಯಕ್ಕೆ ಮೃತದೇಹವನ್ನು ಮಂಗಳೂರಿನಿಂದ ಕರೆದುಕೊಂಡು ಬರಲಾಯಿತು. ಈ ವೇಳೆ ಕುಟುಂಬಸ್ಥರು, ಸ್ನೇಹಿತರು ಎಲ್ಲರ ಕಣ್ಣಾಲಿಗಳು ಸತ್ಯಣ್ಣನ ಪಾರ್ಥೀವ ಶರೀರ ನೋಡಿ ತೇವಗೊಂಡವು. ಎರಡು ದಿನಗಳ ಹಿಂದೆ ಸತ್ಯಣ್ಣ ಅವರು ಇದ್ದಕ್ಕಿದ್ದಂತೆ ಶಾಪ್ ನಲ್ಲಿ ಕುಸಿದು ಬಿದ್ದಿದ್ದರು. ತಲೆಗೆ ಸಂಬಂಧಪಟ್ಟ ಆಂತರಿಕ ಸಮಸ್ಯೆಗೆ ತುತ್ತಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಜೀವನ್ಮರಣ ಹೋರಾಟ ನಡೆಸಿ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಸದ್ಯ ಅವರ ಮೃತದೇಹವನ್ನು ಇಲ್ಲಿಂದ ಅವರ ಹುಟ್ಟೂರು ಮುಳ್ಳೇರಿಯಾಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ತಿಳಿದು ಬಂದಿದೆ.

See also  ಮದ್ಯದಂಗಡಿ ವಿಚಾರಕ್ಕೆ ವೇದಿಕೆಯಲ್ಲೇ ಕಿತ್ತಾಡಿಕೊಂಡ ಶಾಸಕರು..! ಯಾರು ಆ ಶಾಸಕರು? ಏನಿದು ಘಟನೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget