ಕರಾವಳಿಸುಳ್ಯ

ಸುಳ್ಯ:ಫಲಿಸಲಿಲ್ಲ ಚಿಕಿತ್ಸೆ, ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಜ್ಯೋತಿಷಿ ಮೃತ್ಯು

ನ್ಯೂಸ್ ನಾಟೌಟ್ : ತಲೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ಕೂರು ಗ್ರಾಮದ ಜ್ಯೋತಿಷಿ ವಾಸುದೇವ ಗೌಡ ಚಾರ್ಮತ(44) ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ.ಮೇ.27ರಂದು ನಡುಗಲ್ಲಿನ ಅಂಜೇರಿ ಎಂಬಲ್ಲಿ ಬೈಕ್ ಸ್ಕಿಡ್ ಆದ ಪರಿಣಾಮ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು.ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ವಾಸುದೇವ ಗೌಡ ಚಾರ್ಮತ ಅವರು ಗುತ್ತಿಗಾರಿಗೆ ಬಂದು ನಡುಗಲ್ಲಿಗೆ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿದ್ದು,ಗಂಭೀರ ಗಾಯಗೊಂಡ ಅವರನ್ನು ಸುಳ್ಯದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು.ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು.ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರಿಗೆ ಪ್ರಜ್ಞೆ ಬಂದ ಮೇಲಷ್ಟೆ ತಲೆಯ ಶಸ್ತ್ರಚಿಕಿತ್ಸೆಗೆ ನಿರ್ಧರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇಂದು ಅವರು ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

Related posts

ಸುಳ್ಯ: ದ. ಕ. ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ನಾಳೆ ಸುಳ್ಯಕ್ಕೆ ಆಗಮನ,ಪ್ರಮುಖರ ಮನೆಗೆ ಭೇಟಿ,ಕಾರ್ಯಕ್ರಮಗಳಲ್ಲಿ ಭಾಗಿ

ವಿಟ್ಲ: ಇವಿಎಂ ನಲ್ಲಿ ತಾಂತ್ರಿಕ ದೋಷ..! ಮತದಾನಕ್ಕೆ ಬಂದವರು ಗಂಟೆಗಟ್ಟಲೇ ಸಾಲಿನಲ್ಲಿಯೇ ನಿಂತು ಸುಸ್ತು

ಉಳ್ಳಾಲ: ಪುಟ್ಟ ಬಾಲಕಿ ಮೇಲೆ 70ರ ಹರೆಯದ ಮುದುಕನಿಂದ ಲೈಂಗಿಕ ಕಿರುಕುಳ..! ಆರೋಪಿಯನ್ನು ಹಿಡಿದು ಜೈಲಿಗಟ್ಟಿದ್ದ ಕೊಣಾಜೆ ಪೊಲೀಸರು