ಕರಾವಳಿಸುಳ್ಯ

ಮಾರಕ ಕಣ್ಣಿನ ಕ್ಯಾನ್ಸರ್ ಗೆ ತುತ್ತಾಗಿದ್ದ ಸುಳ್ಯದ ಬೇಬಿ ಆದ್ಯ ಕೊನೆಗೂ ಬದುಕಲಿಲ್ಲ..!

ನ್ಯೂಸ್ ನಾಟೌಟ್: ಮಾರಕ ಕಣ್ಣಿನ ಕ್ಯಾನ್ಸರ್‌ ಗೆ ತುತ್ತಾಗಿದ್ದ ಸುಳ್ಯದ ಅಜ್ಜಾವರದ ಮೇನಾಲದ ಪುಟ್ಟ ಬಾಲಕಿ ಬೇಬಿ ಆದ್ಯ ನಿಧನಳಾಗಿದ್ದಾಳೆ ಅನ್ನುವ ಆಘಾತಕಾರಿ ವಿಚಾರ ಹೊರಬಿದ್ದಿದೆ.

ಸುಳ್ಯದ ಖ್ಯಾತ ಯೂಟ್ಯೂಬರ್ ವಿಜೆ ವಿಖ್ಯಾತ್ ಮೊದಲ ಬಾರಿಗೆ ಆದ್ಯಳ ಆರೋಗ್ಯ ಸಮಸ್ಯೆ ಬಗ್ಗೆ ತಮ್ಮ ಯೂಟ್ಯೂಬ್ ಚಾನಲ್‌ನಲ್ಲಿ ವರದಿ ಬಿತ್ತರಿಸಿದ್ದರು. ಈ ವೇಳೆ ಬಾಲಕಿಯ ಸಮಸ್ಯೆಗೆ ಸ್ಪಂದಿಸಿ ಸಾವಿರಾರು ಜನರು ಆರ್ಥಿಕವಾಗಿ ನೆರವಾಗಿದ್ದರು. ಸಹೃದಯಿ ದಾನಿಗಳ ನೆರವಿನಿಂದ ಮಗುವನ್ನು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೂ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪರೀಕ್ಷಿಸಿದ್ದ ವೈದ್ಯರು ಮಗು ಬದುಕುವ ಸಾಧ್ಯತೆಗಳು ಕಡಿಮೆ ಇದೆ ಎಂದು ತಿಳಿಸಿದ್ದರು. ಹೀಗಾಗಿ ಮಗುವನ್ನು ವಾಪಸ್ ಮನೆಗೆ ಕರೆದುಕೊಂಡು ಬರಲಾಗಿತ್ತು. ಕಣ್ಣಿನ ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ಹೋಗಿದ್ದರಿಂದ ಮಗು ಎರಡು ದಿನಗಳ ಹಿಂದೆ ನಿಧನವಾಗಿದೆ ಎಂದು ತಿಳಿದು ಬಂದಿದೆ.

Related posts

ಸಂಪಾಜೆ: ಕೊಯನಾಡು ಬಳಿ ಕುಸಿಯುವ ಭೀತಿಯಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ..! ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್, ತಾತ್ಕಾಲಿಕ ರಸ್ತೆ ನಿರ್ಮಿಸಿ ವಾಹನ ಸಂಚಾರಕ್ಕೆ ಅವಕಾಶ

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು-ಆಸ್ಪತ್ರೆ ಕಾರ್ಯವೈಖರಿಗೆ ವಿದೇಶಿಗರೂ ಈಗ ಫುಲ್ ಫಿದಾ..! ಗುಣಮಟ್ಟದ ಅತ್ಯಾಧುನಿಕ ಚಿಕಿತ್ಸೆ ಅರಸಿ ಇಂಗ್ಲೆಂಡಿನಿಂದ ಸುಳ್ಯಕ್ಕೆ ಹಾರಿ ಬಂದ ದಂಪತಿ..!

ಮಂಡೆಕೋಲು: ವಿಷ ಕುಡಿದು ಆತ್ಮಹತ್ಯೆಗೆ ಯತ್ನ, ಮಂಗಳೂರು ಆಸ್ಪತ್ರೆಗೆ ಶಿಫ್ಟ್