ನ್ಯೂಸ್ ನಾಟೌಟ್: ಗಾಂಜಾ ಯುವ ಸಮುದಾಯವನ್ನು ದಾರಿ ತಪ್ಪಿಸುತ್ತದೆ, ಯುವಕರ ಭವಿಷ್ಯವನ್ನು ಹಾಳು ಮಾಡುತ್ತದೆ ಅನ್ನುವ ಹಲವು ಜಾಗೃತಿ ಮೂಡಿಸಿದರೂ ಇನ್ನೂ ಗಾಂಜಾ ಹಾವಳಿ ತಪ್ಪಿಲ್ಲ. ದೇಶ, ರಾಜ್ಯ ವ್ಯಾಪಿ ಇರುವ ಗಾಂಜಾದ ಘಮಲು ಇತ್ತೀಚೆಗೆ ಸುಳ್ಯ ತಾಲೂಕಿನಲ್ಲೂ ಹರಡುತ್ತಿದೆ.
ಸದ್ದಿಲ್ಲದೆ ಕಾರ್ಯಾಚರಿಸುತ್ತಿರುವ ಈ ಗಾಂಜಾದ ಅಡ್ಡೆಗಳ ಮೇಲೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಇದೀಗ ತೀವ್ರ ನಿಗಾವಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸುಳ್ಯದ ಜಯ ನಗರದಿಂದ ಮೂವರನ್ನು ಬಂಧಿಸಲಾಗಿದೆ. ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ.