ನ್ಯೂಸ್ ನಾಟೌಟ್: ತಲವಾರು ಹಿಡಿದು ಬೈಕ್‌ನಲ್ಲಿ ಬಂದ ಅಪರಿಚಿತರು ಸುಳ್ಯದಲ್ಲಿ ಕೆಲವು ಹೊತ್ತು ಆತಂಕ ಸೃಷ್ಟಿಸಲು ಪ್ರಯತ್ನ ನಡೆಸಿದ ಘಟನೆ ಇದೀಗ ವರದಿಯಾಗಿದೆ.
ಗಾಂಧೀನಗರದ ವೈನ್ ಶಾಪ್ ಮುಂದೆ ಬೈಕ್ ನಲ್ಲಿ ಇಬ್ಬರು ಬಂದಿದ್ದರು, ಇವರ ಕೈನಲ್ಲಿ ತಲವಾರು ಇತ್ತು, ಇದನ್ನು ಗಮನಿಸಿದ ಕೆಲವರು ಅಲ್ಲಿ ಸೇರುತ್ತಿದ್ದಂತೆ ಅವರು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಆಗಂತುಕರು ಸ್ಪೆಂಡರ್ ಬೈಕ್ ನಲ್ಲಿ ಬಂದಿದ್ದರು ಎನ್ನಲಾಗಿದೆ. ಇವರು ಬಂದ ಉದ್ದೇಶ ಏನಿರಬಹುದು ಅನ್ನುವುದರ ಕುರಿತು ಇದೀಗ ಸಾರ್ವಜನಿಕರಲ್ಲಿ ಹಲವು ಅನುಮಾನ ಮೂಡಿದೆ.