ಕರಾವಳಿ

ಸುಳ್ಯ: ನಿವೃತ್ತ ಫಾರೆಸ್ಟ್‌ ಅಧಿಕಾರಿ ಪುತ್ರ ನೇಣಿಗೆ ಶರಣು

ನ್ಯೂಸ್ ನಾಟೌಟ್ : ಸುಳ್ಯದ ಪರಿವಾರಕಾನದ ನಿವಾಸಿ ನಿವೃತ್ತ ಫಾರೆಸ್ಟರ್ ಮೋನಪ್ಪ ಗೌಡ ಎಂಬವರ ಮಗ ಸೋಮಶೇಖರ (45) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಶನಿವಾರ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಸೋಮಶೇಖರವರು ತಮ್ಮ ಮನೆಯ ಹಿಂಬದಿಯ ಗುಡ್ಡೆಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಆತ್ಮಹತ್ಯೆ ಮಾಡಿಕೊಂಡ ಕಾರಣ ಇನ್ನೂ ತಿಳಿದು ಬಂದಿಲ್ಲ. ಮೃತ ದೇಹವನ್ನು ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

Related posts

ಮಂಗಳೂರು: ಜನ ನಿಬಿಡ ವಸತಿ ಸಂಕೀರ್ಣದ ಬಳಿ ಗ್ಯಾಸ್‌ ಸಿಲಿಂಡರ್‌ ಅಕ್ರಮ ದಾಸ್ತಾನು, ಪೊಲೀಸರ ಮಿಂಚಿನ ಕಾರ್ಯಾಚರಣೆ, 26 ಸಿಲಿಂಡರ್‌ಸಹಿತ ಓರ್ವ ವಶ

ಕೊಕ್ಕಡ:ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಹಸಿಮೀನಿನ ವ್ಯಾಪಾರಿ

ಪರೀಕ್ಷೆ ಶುಲ್ಕ ಪಾವತಿಸದ್ದಕ್ಕೆ ವಿದ್ಯಾರ್ಥಿಗಳಿಗೆ ಶಿಕ್ಷೆ..! ಚಪ್ಪಲಿ ಬಿಡುವ ಜಾಗದಲ್ಲಿ ಮಕ್ಕಳನ್ನು ಕೂರಿಸಿದ್ರು..!