ಕ್ರೈಂ

ಸುಳ್ಯ: ನಿವೃತ್ತ ಫಾರೆಸ್ಟ್ ಆಫೀಸರ್ ಪದ್ಮಯ್ಯ ಗೌಡ ನಿಧನ, ಇಂದು ಮಧ್ಯಾಹ್ನ ಅಂತ್ಯ ಸಂಸ್ಕಾರ

ನ್ಯೂಸ್ ನಾಟೌಟ್: ಸುಳ್ಯ ಕಸಬಾದ ಬೀರಮಂಗಲ ನಿವಾಸಿ ನಿವೃತ್ತ ಪಾರೆಸ್ಟರ್ ಪದ್ಮಯ್ಯ ಗೌಡ ಅವರು ಅಸೌಖ್ಯದಿಂದ ಇಂದು ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರ್ಷವಾಗಿತ್ತು.

ಮೃತರು ಪತ್ನಿ ನಿವೃತ್ತ ಆರೋಗ್ಯ ಸಹಾಯಕಿ ಸತ್ಯವತಿ, ಪುತ್ರ ಪ್ರೀತೇಶ್ ಪಿ, ಪುತ್ರಿ ಪಲ್ಲವಿ ಪಿ, ಸೊಸೆ ರೂಪ, ಅಳಿಯ ಗಣೇಶ್ ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಬೀರಮಂಗಲ ಮನೆಯಲ್ಲಿ ಇರಿಸಲಾಗಿದ್ದು ಅಂತ್ಯ ಸಂಸ್ಕಾರವನ್ನು ಇಂದು ಮಧ್ಯಾಹ್ನ 2.00 ಗಂಟೆಗೆ ನೆರವೇರಿಸಲಾಗುತ್ತದೆ ಎಂದು ತಿಳಿದು ಬಂದಿದೆ.

Related posts

ಬ್ರಹ್ಮಾವರ: ಮೀನು ಹಿಡಿಯಲು ತೆರಳಿದ್ದ ನಾಲ್ವರು ನೀರುಪಾಲು

ಬಲಿಪ ಪ್ರಸಾದ್ ಭಾಗವತರು ಇನ್ನಿಲ್ಲ

ಭಾರತದ ನ್ಯೂಕ್ಲಿಯರ್ ವಿಜ್ಞಾನಿ ಡಾ.ಆರ್ ಚಿದಂಬರಂ ನಿಧನ..! ಭಾರತ ಸರ್ಕಾರಕ್ಕೆ ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿದ್ದ ಪದ್ಮ ವಿಭೂಷಣ ಪುರಸ್ಕೃತ ವಿಜ್ಞಾನಿ