ಕರಾವಳಿ

ಸುಳ್ಯ : ಹಲವಾರು ತಿಂಗಳಿನಿಂದ ಹಾಗೆಯೇ ಬಿದ್ದಿದೆ ಸಾರ್ವಜನಿಕ ಪುಟ್ ಪಾತ್ ..! ಶಾಲೆ ಮಕ್ಕಳು ಸೇರಿದಂತೆ ಮೋರಿಯೊಳಗೆ ಸಿಲುಕಿ ಹಲವರ ಕಾಲು ಜಖಂ..! ಅಧಿಕಾರಿಗಳೇ ಕಣ್ಣೆದುರೇ ಇರುವ ಸಮಸ್ಯೆ ಬಗೆಹರಿಯುವುದೆಂದು..?

ನ್ಯೂಸ್ ನಾಟೌಟ್ : ಸುಳ್ಯದ ಖಾಸಗಿ ಬಸ್ ನಿಲ್ದಾಣದ ಪುಟ್ ಪಾತ್ ನಲ್ಲಿ ಓಡಾಡುವ ಜನರೇ ನೀವು ಸ್ವಲ್ಪ ಹುಷಾರಾಗಿ ನಡೆಯಿರಿ.. ಸ್ವಲ್ಪ ಯಾಮಾರಿದರೂ ನಿಮ್ಮ ಕಾಲು ಯಮ ಸ್ವರೂಪಿಯಾಗಿ ಬಾಯ್ತೆರದು ಕೊಂಡು ಕುಳಿತಿರುವ ಮೋರಿಯೊಳಗೆ ಜಾರಿ ಅಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಕಳೆದ ಕೆಲವು ತಿಂಗಳಿನಿಂದ ಈ ಸಮಸ್ಯೆ ನಡೆದಾಡುವ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟು ಮಾಡಿದೆ.

ಈ ಮೋರಿಯೊಳಗೆ ಕಾಲು ಜಾರಿ ಕೆಲವರಿಗೆ ಗಾಯಗಳಾಗಿವೆ. ಶಾಲೆ ಮಕ್ಕಳು ಕೂಡ ಮೋರಿಯಿಂದಾಗಿ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅನಾಹುತ ಸಂಭವಿಸುತ್ತಿದ್ದರೂ ಈ ಬಗ್ಗೆ ಇದುವರೆಗೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳದಿರುವುದು ವಿಪರ್ಯಾಸವೇ ಸರಿ.


ಸಾರ್ವಜನಿಕರು ಅದರಲ್ಲೂ ಮಹಿಳೆಯರು, ಮಕ್ಕಳು ನಡೆದಾಡುವ ಜಾಗದಲ್ಲಿ ಇಷ್ಟೊಂದು ಅಪಾಯವಿದ್ದರೆ ನಡೆದಾಡುವುದಾದರೂ ಹೇಗೆ..? ವಯಸ್ಸಾದವರು ಸರಿಯಾಗಿ ಕಣ್ಣು ಕಾಣಿಸದೆ ಬಂದರೆ ಮೋರಿಯೊಳಗೆ ಬಿದ್ದು ಅಪಾಯ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಶಾಲಾ ಮಕ್ಕಳು ಇಲ್ಲಿ ಹೆಚ್ಚು ನಡೆದಾಡುತ್ತಾರೆ ಎಂದು ಸ್ಥಳೀಯರೊಬ್ಬರು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

Related posts

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ KSRTC ಬಸ್..! ಶಾಲಾ ಮಕ್ಕಳೇ ಇದ್ದ ಬಸ್ ಅನ್ನು ಕಾಪಾಡಿತು ಆ ಒಂದು ಮರ..!

ತೆಂಗಿನಕಾಯಿ ಕೀಳುತ್ತಿದ್ದ ವೇಳೆ ಎಳನೀರು ತಲೆ ಮೇಲೆ ಬಿದ್ದು ವ್ಯಕ್ತಿ ಮೃತ್ಯು

ದಕ್ಷಿಣ ಕನ್ನಡ: ಜಿಲ್ಲಾಧಿಕಾರಿಯಾಗಿ ಎಂ.ಆರ್.ರವಿಕುಮಾರ್ ಅಧಿಕಾರ ಸ್ವೀಕಾರ