ಕ್ರೈಂಸುಳ್ಯ

ಸುಳ್ಯ: ಮುಸ್ಲಿಂ ಯುವಕನಿಗೆ ಥಳಿತ ಪ್ರಕರಣ, ಇಬ್ಬರು ಹಿಂದೂ ಕಾರ್ಯಕರ್ತರು ಅರೆಸ್ಟ್

ನ್ಯೂಸ್ ನಾಟೌಟ್: ಬಸ್ ನಲ್ಲಿ ಪ್ರಯಾಣಿಸುವಾಗ ಹಿಂದೂ ಯುವತಿಯ ಮೈ ಟಚ್ ಮಾಡಿದ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಸ್ಲಿಂ ಯುವಕನೊಬ್ಬನನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿ ಸುಳ್ಯದ ಹಳೆ ಬಸ್ ಸ್ಟ್ಯಾಂಡ್ ಹಾಗೂ ಸುತ್ತಮುತ್ತ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಯುವಕರು ಹಿಂದೂ ಸಂಘಟನೆಯವರು ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿ ಇದೀಗ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನಿಂದ ನಿಯಾಝ್ ಎಂಬ 22 ವರ್ಷದ ಯುವಕ ಬಸ್‌ ನಲ್ಲಿ ತನ್ನ ಊರಿಗೆ ಪ್ರಯಾಣಿಸುತ್ತಿದ್ದ, ಈ ವೇಳೆ ಸುಬ್ರಹ್ಮಣ್ಯದ ಬಿಸಿಲೆ ಘಾಟ್ ಬಳಿ ಯುವತಿಯೊಬ್ಬಳು ಅದೇ ಬಸ್ ಗೆ ಹತ್ತಿದ್ದಾಳೆ. ಈತನ ಪಕ್ಕದಲ್ಲಿದ್ದ ಸೀಟ್ ನಲ್ಲಿ ಕುಳಿತಿದ್ದಾಳೆ. ಈ ವೇಳೆ ಕಿಟಕಿ ಪಕ್ಕದಲ್ಲಿದ್ದ ಈತ ಕಿಟಕಿಯಿಂದ ಪಕ್ಕದ ಸೀಟಿಗೆ ಹೋಗುವುದಾಗಿ ಯುವತಿ ಬಳಿ ತಿಳಿಸಿದ್ದ, ಇದಕ್ಕೆ ಯುವತಿ ಒಪ್ಪಿದ್ದಳು. ಅಂತೆಯೇ ಆಕೆ ಕಿಟಕಿ ಸೀಟಿನಲ್ಲಿ ಕುಳಿತುಕೊಳ್ಳುತ್ತಾಳೆ, ಪಕ್ಕದ ಸೀಟಿಗೆ ಇವನು ಬರುತ್ತಾನೆ, ಪ್ರಯಾಣದ ಮಾರ್ಗ ಮಧ್ಯೆ ಯುವಕನ ಮೈ ಯುವತಿಯ ಮೈಗೆ ತಾಗಿದೆ. ಇದನ್ನು ಆಕೆ ಪ್ರಶ್ನಿಸಿದ್ದಾಳೆ. ಆಗ ಅಲ್ಲಿಯೇ ವಾಗ್ವಾದ, ಚರ್ಚೆ ನಡೆದಿದೆ. ಇದಾದ ಬಳಿಕ ಯುವಕ ಅದೇ ಬಸ್ ನಲ್ಲಿ ಸುಳ್ಯಕ್ಕೆ ಬಂದಿದ್ದಾನೆ. ಈ ವೇಳೆ ಸುಳ್ಯದ ಪೈಚಾರ್ ಸಮೀಪ ಇಳಿದಾಗ ಕಾರ್ ನಲ್ಲಿ ಬಂದ ಅಪರಿಚಿತರ ತಂಡ ಆತನನ್ನು ಕಿಡ್ನ್ಯಾಪ್ ಮಾಡಿದೆ. ಸುಳ್ಯದ ಹಳೆ ಬಸ್ ನಿಲ್ದಾಣದ ಹಿಂದೆ ಕರೆದುಕೊಂಡು ಬಂದು ಹಲ್ಲೆ ನಡೆಸಿದ್ದು , ಸುಳ್ಯ ಸರ್ಕಾರಿ ಬಸ್ ನಿಲ್ದಾಣದ ಹಿಂದೆಯೂ ಕರೆತಂದು ಹಿಗ್ಗಾಮುಗ್ಗಾ ಥಳಿಸಿದೆ ಎಂದು ಸಂತ್ರಸ್ಥ ಯುವಕ ಮಾಧ್ಯಮಗಳಿಗೆ ಹೇಳಿದ್ದಾನೆ. ಹೊಡೆತದ ಬಿಸಿಗೆ ಯುವಕ ಪ್ರಜ್ಞೆ ತಪ್ಪಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ನನ್ನ ಮಕ್ಕಳನ್ನು ಗುಂಡು ಹೊಡೆದು ಸಾಯಿಸಿ ಎಂದ ರೌಡಿ ಶೀಟರ್ ನ ತಂದೆ..! ಪೊಲೀಸರ ಮೇಲೂ ಹಲ್ಲೆಗೆ ಮುಂದಾಗಿದ್ದ ಅಪ್ತಾಭ್..!

ಗ್ರಾಮೀಣ ಪ್ರತಿಭೆಗಳನ್ನು ಪ್ರೊ ಕಬಡ್ಡಿವರೆಗೆ ಕೊಂಡೊಯ್ದ ಕೆವಿಜಿ ಸ್ಪೋರ್ಟ್ಸ್ ಅಕಾಡೆಮಿ, ನನಸಾಯಿತು ಅಕ್ಷಯ್ ಕೆ.ಸಿ ಕನಸು

ರಸ್ತೆ ಬದಿ ನಿಂತು ಜಗಳವಾಡುತ್ತಿದ್ದವರಿಗೆ ಬಸ್ ಡಿಕ್ಕಿ..! ಇಬ್ಬರು ಸ್ಥಳದಲ್ಲೇ ಸಾವು..!