ಕ್ರೈಂ

ಸುಳ್ಯದ ಹಳೆ ಸಿನಿಮಾ ಟಾಕೀಸ್‌ ಪಕ್ಕದಲ್ಲಿ ಶವ ಪತ್ತೆ

538

ಸುಳ್ಯ: ಇಲ್ಲಿನ ರಥ ಬೀದಿಯ ಸಮೀಪದಲ್ಲಿರುವ ಹಳೆ ಸಿನಿಮಾ ಟಾಕೀಸ್ ನ ವಠಾರದಲ್ಲಿ ಮೃತದೇಹವೊಂದು ನಿನ್ನೆ ಪತ್ತೆಯಾಗಿದೆ. ಸುಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಳಿಸಿಕೊಡಲಾಗಿದೆ.

ಮೃತರು ಅಜ್ಜಾವರ ಗ್ರಾಮದ ಕಾಟಿಪಳ್ಳ ನಿವಾಸಿ ಮಾಯಿಲಪ್ಪ ಎಂದು ತಿಳಿದು ಬಂದಿದೆ. ಮಾಯಿಲಪ್ಪ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು, ಕುಡಿತದ ಚಟವೂ ಇತ್ತು ಎನ್ನಲಾಗಿದೆ. ಮಾಯಿಲಪ್ಪ ಅವರು ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಇನ್ನಷ್ಟೇ ಖಚಿತವಾಗಿ ತಿಳಿದು ಬರಬೇಕಿದೆ.

See also  ಅರಂಬೂರು: ಚಪ್ಪಲಿ ತೆಗೆಯೋಕೆ ಹೋಗಿ ಕಾರಿನ ಗೇರ್ ಚೇಂಜ್ ಮಾಡಿದ ಅಪ್ರಾಪ್ತ ಮಗ, ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸಿ ಕಲ್ಲಿಗೆ ಗುದ್ದಿ ನಿಂತ ಕಾರು
  Ad Widget   Ad Widget   Ad Widget   Ad Widget   Ad Widget   Ad Widget   Ad Widget