ಕರಾವಳಿವೈರಲ್ ನ್ಯೂಸ್ಸುಳ್ಯ

ಸುಳ್ಯ , ಬೆಳ್ಳಾರೆ ವ್ಯಾಪ್ತಿಯಲ್ಲಿ ಮದ್ಯದಂಗಡಿ, ಬಾರ್‌ ಬಂದ್ ಮಾಡಲು ಜಿಲ್ಲಾಧಿಕಾರಿ ಸೂಚನೆ, ಯಾವ ದಿನ ಮದ್ಯ ಸಿಗಲ್ಲ..? ಇಲ್ಲಿದೆ ನೋಡಿ ಡಿಟೇಲ್ಸ್ ..

ನ್ಯೂಸ್ ನಾಟೌಟ್: ಸುಳ್ಯ ಹಾಗೂ ಬೆಳ್ಳಾರೆ ವ್ಯಾಪ್ತಿಯಲ್ಲಿ ಒಂದು ದಿನ ಬಾರ್, ಮದ್ಯದಂಗಡಿಯನ್ನು ಮುಚ್ಚಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ.

ಮೊಸರು ಕುಡಿಕೆ ಹಿನ್ನೆಲೆಯಲ್ಲಿ ಈ ಕ್ರಮವನ್ನು ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಳ್ಳಲಾಗಿದೆ. ಸುಳ್ಯದಲ್ಲಿ ಮಾತ್ರವಲ್ಲ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೆಚ್ಚಿನ ಕಡೆ ಆದೇಶವನ್ನು ಹೊರಡಿಸಲಾಗಿದೆ.

ಬೆಳ್ಳಾರೆಯಲ್ಲಿ ಸೆ.9 ರಂದು ಹಲವು ಬಾರ್ ಗಳಲ್ಲಿ ಬಂದ್ ಆಗಲಿದೆ. ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶ ಪ್ರಕಾರವಾಗಿ ನೋಡುವುದಾದರೆ ಬೆಳ್ಳಾರೆ ವ್ಯಾಪ್ತಿಯ ವಿನು ವೈನ್ಸ್, ಕಾವೇರಿ ಬಾರ್, ಪ್ರಶಾಂತ್ ವೈನ್ಸ್ ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಬಂದ್ ಮಾಡಲಾಗುತ್ತಿದೆ.

ಸೆ.16 ರಿಂದ ಸುಳ್ಯ ವ್ಯಾಪ್ತಿಯ ಪ್ರಕಾಶ್ ವೈನ್ ಗಾಂಧಿನಗರ, ವಿಖ್ಯಾತ್ ವೈನ್ಸ್ ಗಾಂಧಿನಗರ , ಸ್ವಸ್ತಿಕ್ ವೈನ್ಸ್ ಸುಳ್ಯ ಕಸಬಾ , ಪ್ರಶಾಂತ್ ವೈನ್ಸ್ ಸುಳ್ಯ ಕಸಬಾ ರಾಜೇಶ್ ಬಾರ್ & ರೆಸ್ಟೋರೆಂಟ್ ಸುಳ್ಯ ಕಸಬಾ , ಜನಪ್ರಿಯ ಬಾರ್ & ರೆಸ್ಟೋರೆಂಟ್ ಸುಳ್ಯ ಕಸಬಾಕ, ಹಿಲ್ ಸೈಡ್ ಬಾರ್ & ರೆಸ್ಟೋರೆಂಟ್ ಸುಳ್ಯ ಕಸಬಾ , ಪ್ರಶಾಂತ್ ಬಾರ್ & ರೆಸ್ಟೋರೆಂಟ್ ಹಳೇ ಗೇಟು, ರಾಮ ಬಾರ್ & ರೆಸ್ಟೋರೆಂಟ್ ಸುಳ್ಯ ಕಸಬಾ, ಸನ್ನಿಧಿ ಬಾರ್ & ರೆಸ್ಟೋರೆಂಟ್ ಬಸ್ ನಿಲ್ದಾಣ ಎದುರು, ಸುಳ್ಯ, ಎಂ ಎಸ್ ಐ ಎಲ್ ಸುಳ್ಯ ಕಸಬಾ, ಲಿಕ್ವೀಡ್ ಕೊಂಟಿಂನೆಂಟ್ ಓಡ ಬೈಸುಳ್ಯ, ಮಧು ವೈನ್ಸ್ ಸುಳ್ಯ ಬೆಳಗ್ಗಿನಿಂದ ಸಂಜೆ ತನಕ ಬಂದ್ ಆಗಿರಲಿದೆ ಎಂದು ತಿಳಿಸಲಾಗಿದೆ.

Related posts

ಕಪ್ಪೆಯ ಪಿಜ್ಜಾವನ್ನು ಪರಿಚಯಿಸಿದ ‘ಪಿಜ್ಜಾ ಹಟ್‌’ ಸಂಸ್ಥೆ..! ಇದರ ಬೆಲೆ ಬರೋಬ್ಬರಿ 2000 ರೂಪಾಯಿ..!

ಬಿಜೆಪಿಯ ಮತ್ತೋರ್ವ ಮಾಜಿ ಸಿಎಂ ಕಾಂಗ್ರೆಸ್ ಸೇರ್ತಾರಾ..? ಯಾರು ಕರಾವಳಿಯ ಆ ಮಾಜಿ ಕೇಂದ್ರ ನಾಯಕ?

ಬೆಳ್ಳಾರೆಯತ್ತ ಮಸೂದ್ ಮೃತ ದೇಹ