ಕರಾವಳಿ

ಸುಳ್ಯ: ದೈವ ನರ್ತಕನಿಗೆ ಜಾತಿ ನಿಂದನೆ

ನ್ಯೂಸ್ ನಾಟೌಟ್: ದೈವ ನರ್ತನ ಸೇವೆ ಮಾಡಲು ಜ್ಯೋತಿಷಿಯೊಬ್ಬರು ಅಡ್ಡಿಪಡಿಸುತ್ತಿದ್ದಾರೆ ಹಾಗೂ ಜಾತಿ ನಿಂದನೆ ಮಾಡಿದ್ದಾರೆಂದು ಆರೋಪಿಸಿ ದೈವ ನರ್ತಕರೊಬ್ಬರು ಪುತ್ತೂರಿನ ಎ ಎಸ್ ಪಿಯವರಿಗೆ  ದೂರು ನೀಡಿದ ಘಟನೆ ನಡೆದಿದೆ.

ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ  ಬಾಳಿಲ ಗ್ರಾಮದ ದಿ. ಬಾಬು ಪರವರ ಮಗ ಶೇಷಪ್ಪ ನವರು ದೂರು ನೀಡಿದ ದೈವ ನರ್ತಕ.ಪಂಜದ ದೈವಜ್ಞ ಸತ್ಯನಾರಾಯಣ ಭಟ್ ರವರು  ಜಾತಿ ನಿಂದನೆ ಮಾಡಿದ್ದಾರೆ ಹಾಗೂ ಕುಲಕಸುಬು ನಡೆಸಲು ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಶೇಷಪ್ಪನವರು ಮೇ 4ರಂದು ದೂರು ನೀಡಿದ್ದು ಇದನ್ನು ಸ್ವೀಕರಿಸಿರುವ ಪೊಲೀಸರು ಕೇಸ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಅಯ್ಯನಕಟ್ಟೆ ಎಂಬಲ್ಲಿ ದೈವಸ್ಥಾನವಿದ್ದು, ಇಲ್ಲಿ  ಕಳೆದ ಮೂರು ವರ್ಷಗಳಿಂದ ಶೇಸಪ್ಪನವರು  ದೈವ ನರ್ತನ ಮಾಡಿಕೊಂಡು ಬರುತ್ತಿದ್ದರು. ನರ್ತನ ಸೇವೆಯ ಸಂದರ್ಭ ಕೆಲವರ ಅಣತಿಯಂತೆ ತಾನು ನಡೆದುಕೊಂಡಿಲ್ಲವೆಂಬ  ದ್ವೇಷದಿಂದ ವಿವಿಧ ಕಾರಣಗಳನ್ನು  ಮುಂದಿಟ್ಟು  ತನ್ನನ್ನು ಕೆಲವರು ವಿರೋಧಿಸುತ್ತಿದ್ದಾರೆ ಎಂದು ಶೇಷಪ್ಪನವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ

Related posts

ಸುಬ್ರಹ್ಮಣ್ಯ: ಆಂಜನೇಯ ಗುಡಿಯಲ್ಲಿ ಕಳ್ಳತನ ಸುದ್ದಿ ವೈರಲ್, ಕಳ್ಳತನವೇ ಆಗಿಲ್ಲವೆಂದು ಎಸ್ ಐ ಸ್ಪಷ್ಟನೆ

ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ, ಪೊಲೀಸರ ಮೇಲೂ ಬಿದ್ದ ಕಲ್ಲು..! ನಾಗಮಂಗಲದ ಬಳಿಕ ಮತ್ತೊಂದು ಹಿಂಸಾಚಾರ..!

ಮಡಿಕೇರಿ: ಗುಂಡು ಹೊಡೆದು ವ್ಯಕ್ತಿ ಆತ್ಮಹತ್ಯೆ, ಕಾರಣ ನಿಗೂಢ