ಶಿಕ್ಷಣಸುಳ್ಯ

ಸುಳ್ಯದ ಅಭಿವೃದ್ಧಿಯ ಹರಿಕಾರ ದಿ.ಡಾ.ಕೆ.ವಿ.ಜಿ ಯವರನ್ನು ಸ್ಮರಿಸಿದ ಡಾ. ಕೆ. ವಿ. ಚಿದಾನಂದ ಗೌಡರು, ಕೆ.ವಿ.ಜಿ ವೃತ್ತದ ಬಳಿ ಇರುವ ಪೂಜ್ಯರ ಪುತ್ಥಳಿಗೆ ಗಣ್ಯರಿಂದ ಪುಷ್ಪನಮನ

ನ್ಯೂಸ್ ನಾಟೌಟ್: ಸುಳ್ಯದ ಅಮರ ಶಿಲ್ಪಿ ಡಾ.ಕುರುಂಜಿ ವೆಂಕಟರಮಣಗೌಡರ 11ನೇ ಪುಣ್ಯಸ್ಮರಣೆಯ ಪ್ರಯುಕ್ತ ಕೆವಿಜಿ ಕ್ಯಾಂಪಸ್ ಬಳಿ ಇರುವ ಕೆವಿಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗಣ್ಯರು ಗೌರವ ನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷ ರಾದ ಡಾ. ಕೆ. ವಿ. ಚಿದಾನಂದ ಹಿಂದುಳಿದ ಪ್ರದೇಶವಾದ ಸುಳ್ಯವನ್ನು ಅಭಿವದ್ಧಿಗೊಳಿಸಿದ ಬಗೆಯನ್ನು ವಿವರಿಸಿದರು. ಜೊತೆಗೆ ಸುಳ್ಯ ಅಭಿವೃದ್ಧಿ ಹೊಂದಿರದ ಕಾಲದಲ್ಲಿ ಸಮಾಜದ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸಿ ಶಿಕ್ಷಣ ಕ್ರಾಂತಿ ಮಾಡಿದ ಕೆ.ವಿ.ಜಿ ಅವರ ಸಾಧನೆಯನ್ನು ಸ್ಮರಿಸಿದರು.ಕೆವಿಜಿಯವರ ಸಂಸ್ಮರಣೆಯನ್ನು ಆಯೋಜಿಸಿದ ಎಲ್ಲಾ ಸಂಘ ಸಂಸ್ಥೆಗಳ ಪದಾಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಉಪಾಧ್ಯಕ್ಷೆ ಶೋಭಾ ಚಿದಾನಂದ, ಕಾರ್ಯದರ್ಶಿ ಗಳಾದ ಕೆ. ವಿ ಹೇಮನಾಥ್, ಕೌಂನ್ಸಿಲ್ ಮೆಂಬರ್ ಜಗದೀಶ್ ಅಡ್ತಲೆ, ಆಡಳಿತ ಸಲಹೆಗಾರರಾದ ಪ್ರೊ.ದಾಮೋದರ ಗೌಡ, ಪ್ರೊ. ಬಾಲಚಂದ್ರ ಗೌಡ, ಸುಳ್ಯ ತಹಸೀಲ್ದಾರ್ ಮಂಜುನಾಥ್, ತಾಲೂಕು ವೈದ್ಯಾಧಿಕಾರಿ ಡಾ. ನಂದಕುಮಾರ್, ವರ್ತಕರ ಸಂಘದ ಅಧ್ಯಕ್ಷ ಸುಧಾಕರ್ ರೈ, ಸುಳ್ಯ ಹಬ್ಬದ ಸ್ಥಾಪಕಾಧ್ಯಕ್ಷ ಜಯಪ್ರಕಾಶ್ ರೈ,ಸುಳ್ಯ ಹಬ್ಬ ಸಮಾಜ ಸೇವಾ ಇದರ ನೂತನ ಅಧ್ಯಕ್ಷ ಡಾ. ಎನ್. ಎ ಜ್ಞಾನೇಶ್, ರೋಟರಿ ಅಧ್ಯಕ್ಷೆ ಯೋಗಿತಾ ಗೋಪಿನಾಥ್, ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ, ಕ.ಸಾ.ಪ ಅಧ್ಯಕ್ಷ ಚಂದ್ರಶೇಖರ್ ಪೇರಾಲು, ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್ ಎ ರಾಮಚಂದ್ರ, ಸಾಯಿ ಶಂಶುದ್ದೀನ್, ಅರೆಭಾಷಾ ಚಿಂತಕ ದೊಡ್ಡಣ್ಣ ಬರೆಮೇಲು ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಸ್ಥಾಪಕ ದಿನಾಚರಣೆ ಸಮಿತಿಯ ಕಾರ್ಯದರ್ಶಿ ಹಾಗು ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರಾಗಿರುವ ಡಾ. ಲೀಲಾಧರ್ ಡಿ.ವಿ. ಆಗಮಿಸಿದ ಅತಿಥಿ ಗಣ್ಯರನ್ನು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನೆಹರೂ ಮೆಮೊರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಕೆವಿಜಿ ಯವರ ಅಭಿಮಾನಿಗಳು, ಕೆವಿಜಿ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರುಗಳು, ಆಡಳಿತಾಧಿಕಾರಿಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Click

https://newsnotout.com/2024/08/bangla-desh-news-head-appointed-by-army-kannada-news/
https://newsnotout.com/2024/08/hindu-cricketer-shek-hassina-suppoerter-kannada-news/

Related posts

ಎಸ್ ಎಸ್ ಎಫ್ ಸುಳ್ಯ ವಿಭಾಗ ವತಿಯಿಂದ 308ನೇ ರಕ್ತದಾನ ಶಿಬಿರ, ಸಂಘಟನೆಯ ಕಾರ್ಯಕ್ಕೆ ಶಾಸಕಿ ಕು.ಭಾಗೀರಥಿ ಮುರುಳ್ಯ ಶ್ಲಾಘನೆ

ಸುಳ್ಯ: ಕಾರು ಮತ್ತು ಲಾರಿ ನಡುವೆ ಅಪಘಾತ..! ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ನವೋದಯ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ:ಜ್ಞಾನದೀಪ ನವೋದಯ ತರಬೇತಿ ಕೇಂದ್ರದ 17 ವಿದ್ಯಾರ್ಥಿಗಳು ಆಯ್ಕೆ