ಕ್ರೈಂ

ಸುಳ್ಯ: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿ ತುಂಬಿದ ಪಾಪಿ ಪತಿ..!

ನ್ಯೂಸ್ ನಾಟೌಟ್: ಸುಳ್ಯ ನಗರದ  ಬೀರಮಂಗಲದ ಬಾಡಿಗೆ ಮನೆಯೊಂದರಲ್ಲಿ ಯುವತಿಯ ಮೃತದೇಹ ಗೋಣಿ ಚೀಲದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಇಮ್ರಾನ್ ಎಂಬಾತ ತನ್ನ ಪತ್ನಿಯನ್ನು ಕೊಂದು ಗೋಣಿಚೀಲದಲ್ಲಿ ತುಂಬಿಸಿ ಪರಾರಿಯಾಗಿರುವುದಾಗಿ ಹೇಳಲಾಗುತ್ತಿದೆ. 


ಇಮ್ರಾನ್ ಕಳೆದ ಆರು ತಿಂಗಳಿನಿಂದ ಬೀರಮಂಗಲ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ಹೊಟೇಲ್ ನಲ್ಲಿ ಹೇಳಿ ಊರಿಗೆ ತೆರಳಿದ್ದ ಎಂದು ತಿಳಿದುಬಂದಿದೆ. ಇಂದು ಅನುಮಾನ ಗೊಂಡ ಪಕ್ಕದ ರೂಂ ನವರು  ಆತನು ಹೋಗುವಾಗ ಆತನ ಪತ್ನಿಯನ್ನು ಕರೆದುಕೊಂಡು ಹೋಗಲಿಲ್ಲ. ಮೊನ್ನೆ ಮನೆಯಲ್ಲಿ ಕಿರುಚುವ ಶಬ್ದ ಕೇಳಿದೆ ಎಂದು ಅವರು  ಸ್ನೇಹಿತರೊಬ್ಬರಿಗೆ ತಿಳಿಸಿದರು. ಅವರು ಹೊಟೇಲ್ ಮಾಲೀಕರಿಗೆ ತಿಳಿಸಿ ಹೊಟೇಲ್ ಮಾಲೀಕರು ಪೋಲಿಸರಿಗೆ ವಿಷಯ ತಿಳಿಸಿ ಪೊಲೀಸರು ಇಂದು ಸಂಜೆ ಬಾಡಿಗೆ ಮನೆಗೆ ಬಂದು ಬಾಗಿಲು ಒಡೆದು ಪರಿಶೀಲಿಸುವಾಗ ಮನೆಯೊಳಗೆ ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಎಂದು ವರದಿಯಾಗಿದೆ.

Related posts

ಅಲಂಕಾರು: ಬೈಕ್‌- ರಿಕ್ಷಾ ನಡುವೆ ಅಪಘಾತ! ನಿಯಂತ್ರಣ ಕಳೆದುಕೊಂಡ ರಿಕ್ಷಾ!

ಮಾನವನ ಮೂಳೆಯಿಂದ ಮಾದಕ ಪದಾರ್ಥ ತಯಾರಿ..! ಈ ದೇಶದಲ್ಲಿ ಸ್ಮಶಾನಗಳಿಗೆ ಕಾವಲು, ತುರ್ತುಪರಿಸ್ಥಿತಿ ಘೋಷಣೆ..!

ಪ್ರವಾಹ ಪರಿಸ್ಥಿತಿ ಪರಿಶೀಲಿಸಲು ಬಂದ ಸಚಿವರ ಮೇಲೆ ಕೆಸರೆರಚಿ, ಕಲ್ಲು ತೂರಿದ ಜನರು..! ಪರಿಸ್ಥಿತಿಯನ್ನು ಅವಲೋಕಿಸದೆ ತಮ್ಮ ವಾಹನದಲ್ಲೇ ಕುಳಿತ ಸಚಿವರ ವಿರುದ್ಧ ಜನಾಕ್ರೋಶ..!