ನ್ಯೂಸ್ ನಾಟೌಟ್: ಕಡಬದಿಂದ ಅಕ್ರಮವಾಗಿ ಗೋ ಸಾಗಾಟ ನಡೆಸುತ್ತಿದ್ದ ವಾಹನವನ್ನು ಸುಳ್ಯದ ಮೊಗರ್ಪಣೆ ಮಸೀದಿ ಬಳಿ ಇದೀಗ ಸಂಘಟಕರು ತಡೆದು ನಿಲ್ಲಿಸಿದ್ದಾರೆ.
ಅಶೋಕ್ ಲೈಲೆಂಡ್ ದೋಸ್ತ್ ಮಾತ್ರವಲ್ಲದೆ ವಾಹನದಲ್ಲಿದ್ದ ವ್ಯಕ್ತಿಗಳನ್ನು ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ಪೊಲೀಸರು ವಾಹನದಲ್ಲಿದ್ದವರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ವಾಹನದಲ್ಲಿ ಎರಡಕ್ಕೂ ಹೆಚ್ಚು ಗೋವುಗಳಿದ್ದವು, ಅದನ್ನು ಪರವಾನಗಿ ಇಲ್ಲದೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.