ಕ್ರೈಂ

ಪರಿವಾರಕಾನ ಅಪಘಾತ: ಆರೋಪಿ ಖುಲಾಸೆ

ಸುಳ್ಯ: ಕಳೆದ ವರ್ಷ ಪರಿವಾರಕಾನದಲ್ಲಿ ನಡೆದಿದ್ದ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ನ್ಯಾಯಾಲಯವು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶ ಹೊರಡಿಸಿದೆ. ಇದರೊಂದಿಗೆ ಪ್ರಕರಣಕ್ಕೆ ತೆರೆ ಬಿದ್ದಂತಾಗಿದೆ.

2021 ಜ.4 ರಂದು ಆಲೆಟ್ಟಿ ಗ್ರಾಮದ ಪರಿವಾರಕಾನ ಎಂಬಲ್ಲಿ ಚಿನ್ನಸ್ವಾಮಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಲಾರಿ ಪರಿವಾರಕಾನದ ಬಳಿ ಅಮ್ಮಣ್ಣಿ ಎಂಬ ಮಹಿಳೆಗೆ ಗುದ್ದಿತ್ತು. ಗಂಭೀರ ಗಾಯಗೊಂಡ ಮಹಿಳೆ ಮೃತಪಟ್ಟಿದ್ದರು. ಈ ಪ್ರಕರಣ ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ಲಾರಿ ಚಾಲಕನ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಯು ಸುಳ್ಯ ನ್ಯಾಯಾಲಯದಲ್ಲಿ ನಡೆದು ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿ ಚಿನ್ನಸ್ವಾಮಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದರು.

Related posts

ಪೊಲೀಸ್‌ ಠಾಣೆಯಲ್ಲಿಯೇ ಅನ್ಯಧರ್ಮದ ಜೋಡಿಯ ಮದುವೆ ಮಾಡಿಸಿದ್ರಾ ಬಜರಂಗದಳದವರು..? ಯುವತಿ ತನ್ನ ಮನೆಯವರ ವಿರುದ್ಧವೇ ಬೆದರಿಕೆ ಕೇಸ್ ದಾಖಲಿಸಿದ್ದೇಕೆ?

ಪಿಕಪ್‌ ನಲ್ಲಿ ಚಿನ್ನ ಸಾಗಾಟ! ಬರೋಬ್ಬರಿ 9 ಕೆಜಿ ಚಿನ್ನ ವಶಕ್ಕೆ ಪಡೆದ ಚಿಕ್ಕಮಗಳೂರು ಪೊಲೀಸರು!

ವಿಟ್ಲ:ನಿಯಂತ್ರಣ ಕಳೆದುಕೊಂಡು ರಿಕ್ಷಾ ಪಲ್ಟಿ,ಪಂಜದ ಆಟೋ ಚಾಲಕ ಸ್ಥಳದಲ್ಲೇ ಸಾವು