ಸುಳ್ಯ

ಸುಳ್ಯ: NMC ಕಾಲೇಜು ವಾರ್ತಾಪತ್ರ “ವಿದ್ಯಾಚೇತನ” ಅನಾವರಣ

ನ್ಯೂಸ್ ನಾಟೌಟ್: ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ವಾರ್ತಾಪತ್ರ “ವಿದ್ಯಾಚೇತನ”ದ ಅನಾವರಣ ಕಾರ್ಯಕ್ರಮವು ಕಾಲೇಜಿನಲ್ಲಿ ನಡೆಯಿತು. ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ ವಾರ್ತಾಪತ್ರ ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಕಾಲೇಜಿನಲ್ಲಿ ಹಮ್ಮಿಕೊಳ್ಳುವ ಕಾರ್ಯಚಟುವಟಿಕೆಗಳ ದಾಖಲೆಯ ದೃಷ್ಟಿಯಲ್ಲಿ ವಾರ್ತಾಪತ್ರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ಅಲ್ಲದೆ ಈ ಕೆಲಸಕ್ಕಾಗಿ ಶ್ರಮಿಸಿದ ಸಂಪಾದಕ ಮಂಡಳಿಯನ್ನು ಶ್ಲಾಘಿಸಿದರು.

ವಾರ್ತಾಪತ್ರದ ಕಾರ್ಯನಿರ್ವಾಹಕ ಸಂಪಾದಕಿ ಡಾ. ಅನುರಾಧಾ ಕುರುಂಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಚಾಲಕಿ ಮಮತಾ ಕೆ, ಕಛೇರಿ ಅಧೀಕ್ಷಕಿ ನಿವೇದಿತಾ ಎಂ, ಸಂಪಾದಕ ಮಂಡಳಿಯ ಸದಸ್ಯರಾದ ರಂಜಿತಾ ಬಿ.ಆರ್, ಡಾ. ವಿಜಯಲಕ್ಷ್ಮಿ ಎನ್ ಎಸ್, ಹರ್ಷಕಿರಣ ಬಿ ಆರ್, ಮೀನಾಕ್ಷಿ , ಕಛೇರಿ ಸಿಬ್ಬಂದಿ ಪವನ್ ಉಪಸ್ಥಿತರಿದ್ದರು.

Related posts

ದೊಡ್ಡಡ್ಕದಲ್ಲಿ ಗಾಂಜಾ ಸೇವನೆ, ಇಬ್ಬರು ಯುವಕರನ್ನು ಅರೆಸ್ಟ್ ಮಾಡಿದ ಪೊಲೀಸರು..!

ಸಂಪಾಜೆ:ಅಲ್ಪಕಾಲದ ಅಸೌಖ್ಯದಿಂದ ಚಾಲಕ ನಿಧನ

ಸುಳ್ಯದಲ್ಲಿ ಹೆಚ್ಚುತ್ತಿದೆ ಕಳ್ಳರ ಕಾಟ , ಗುತ್ತಿಗಾರಿನಲ್ಲಿರುವ ತರಕಾರಿ ಅಂಗಡಿಗೆ ನುಗ್ಗಿ ಕಳವು