ಕರಾವಳಿ

ಸುಳ್ಯ ಕಾಲೇಜಿನಲ್ಲಿ ಅನ್ಯಕೋಮಿನ ಹುಡುಗ-ಹುಡುಗಿ ಲಲ್ವಿಡವ್ವಿ

552

ನ್ಯೂಸ್ ನಾಟೌಟ್: ಕಾಲೇಜಿಗೆ ಓದಲು ಹೋದ ಅನ್ಯಕೋಮಿನ ಯುವಕ-ಯುವತಿ ಪ್ರೀತಿ ಮಾಡಿ ಇದೀಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಘಟನೆ ಮಂಗಳವಾರ ಸುಳ್ಯದಲ್ಲಿ ನಡೆದಿದೆ.

ಕಾಲೇಜೊಂದರಲ್ಲಿ ಓದುತ್ತಿದ್ದ ಅನ್ಯಕೋಮಿನ ಯುವಕ-ಯುವತಿ ಕದ್ದು ಮುಚ್ಚಿ ಲವ್ವಿಡವ್ವಿಯಲ್ಲಿ ತೊಡಗಿದ್ದರು. ಈ ವಿಚಾರ ಕಾಲೇಜಿನಾದ್ಯಂತ ಹರಡಿತ್ತು. ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಕೆಲವರು ಅವರನ್ನು ರೆಡ್ ಹ್ಯಾಂಡ್ ಆಗಿ ಮಂಗಳವಾರ ಬೆಳಗ್ಗೆ ಹಿಡಿದಿದ್ದಾರೆ, ಮಾತ್ರವಲ್ಲ ಹುಡುಗಿಯ ಎದುರೇ ಹುಡುಗನ ಬೆನ್ನಿನ ಚರ್ಮ ಜಾರುವಂತೆ ಬಾರಿಸಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಯುವತಿ ತಾನು ಪ್ರೀತಿ ಮಾಡುತ್ತಿದ್ದು ಈ ಬಗ್ಗೆ ಪ್ರಶ್ನೆ ಮಾಡಲು ನೀವು ಯಾರು? ನೀವು ನನಗೆ ಅನ್ನ ಕೊಟ್ಟಿದ್ದೀರಾ? ನನಗೆ ಯಾರನ್ನು ಬೇಕಾದರೂ ಮದುವೆಯಾಗುವ ಹಕ್ಕಿದೆ ಎಂದು ಪ್ರಶ್ನಿಸಿದವರಲ್ಲಿ ಕೇಳಿದ್ದಾಳೆ ಎನ್ನಲಾಗಿದೆ. ಸದ್ಯ ಈ ವಿಚಾರ ಸುಳ್ಯದಾದ್ಯಂತ ಕಾಡ್ಗಿಚ್ಚಿನಂತೆ ವಾಟ್ಸಪ್ ಗ್ರೂಪ್ ಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆಯೂ ಅಂತಹುದೇ ಮತ್ತೊಂದು ಘಟನೆ ಅದೇ ಕಾಲೇಜಿನಲ್ಲಿ ನಡೆದಿತ್ತು, ಆದರೆ ಬೆಳಕಿಗೆ ಬಂದಿರಲಿಲ್ಲ ಎನ್ನಲಾಗಿದೆ.

See also  ಇನ್ನೂ ಆರದ ಪರಶುರಾಮನ ಕಂಚಿನ ಪ್ರತಿಮೆಯ ಜ್ವಾಲಾಗ್ನಿ..! ಅನುದಾನ ತಡೆದು ಇಡೀ ಯೋಜನೆಯನ್ನೇ ಹಳ್ಳ ಹಿಡಿಸುತ್ತಿರುವುದರ ಹಿಂದಿನ ಉದ್ದೇಶವೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget