ಕ್ರೀಡೆ/ಸಿನಿಮಾಸುಳ್ಯ

ಸುಳ್ಯದಲ್ಲಿ ಚಿತ್ರೀಕರಿಸಿದ್ದ ಸಿನಿಮಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ, ಸುಳ್ಯದವರು ನಟಿಸಿದ್ದ ಚಿತ್ರಕ್ಕೆ ಅಂತರಾಷ್ಟ್ರೀಯ ಮಾನ್ಯತೆ


ನ್ಯೂಸ್ ನಟೌಟ್:  ಶ್ಲೋಕ ಮೂವಿಸ್ ನಿರ್ಮಾಣದ ತೃಪ್ತಿ ಸುಂದರ್ ಅಬೀಕರ್ ನಿರ್ದೇಶನದ ಮತ್ತು ಕಿರಣ್ ಹಂಪಾಪುರ್ ಛಾಯಾಗ್ರಹಣದ ನಲ್ಕೆ ಕನ್ನಡ ಚಲನಚಿತ್ರವು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಇದೇ ಮಾರ್ಚ್ 26ರಂದು ಬೆಳಿಗ್ಗೆ 9:30ಕ್ಕೆ ಅಂತರಾಷ್ಟ್ರೀಯ ಚಲನ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಬೆಂಗಳೂರಿನ ಒರಿಯನ್ ಮಾಲ್ ನಲ್ಲಿ ಪ್ರದರ್ಶನ ಕಾಣಲಿದೆ. ಈ ಚಲನ ಚಿತ್ರದ ವಿಶೇಷ ಪಾತ್ರದಲ್ಲಿ ಹಿರಿಯ ಕಲಾವಿದರಾದ ದಿ.ಶಿವರಾಂ ಸರ್ ,ಎಂ ಕೆ ಮಠ,ಕೃಷ್ಣ ಮೂರ್ತಿ ಅವರ ಜೊತೆಯಲ್ಲಿ ಸುಳ್ಯದವರಾದ ನಾರಾಯಣ ಆಚಾರ್ಯ ಕಾಯಾರ್ತೋಡಿ , ಸುಳ್ಯಕೊಡಿ ಮಾಧವ ಗೌಡರು ಈ ಚಿತ್ರದಲ್ಲಿ ನಟಿಸಿದ್ದರು.

ನಾಯಕ ನಟನಾಗಿ ವಿಜಯ್ ಮೈಸೂರು ,ವಿಶೇಷ ಪಾತ್ರದಲ್ಲಿ ಬಾಲ ನಟಿಯಾಗಿ ಸುಳ್ಯ ಫ್ಯೂಶನ್ ಡಾನ್ಸ್ ನ ಮುಖೇನ, ಕೆ ಎ ತನಿಷ್ಕ ಕೊಂಬರಣ ಹಾಗು ಇದರ ಜೊತೆಗೆ K. V .G .I .P .S ನ ವಿದ್ಯಾರ್ಥಿ ಹಾಗೂ ಫ್ಯೂಶನ್ ನ ಹಲವು ವಿದ್ಯಾರ್ಥಿಗಳು ಈ ಚಲನ ಚಿತ್ರದಲ್ಲಿ ಅಭಿಸಿದ್ದರು.

ಫ್ಯೂಶನ್ ಡಾನ್ಸ್ ನ ವಸಂತ್ ಆಚಾರ್ಯ ಕಾಯಾರ್ತೋಡಿ ,ರಂಗ ಭೂಮಿ ಕಲಾವಿದ ರಾಜ್ ಮುಖೇಶ್ ಸುಳ್ಯ , ಉದಯ್ ಬೆಳ್ಳಾರೆ, ಜಗದೀಶ್ ಆಚಾರ್ಯ ಬೆಳ್ಳಾರೆ , ಶಶಿ ಕಳಂಜ, ಜಗದೀಶ್ ಸುಳ್ಯ, ದಿನೇಶ್ ಆಚಾರ್ಯ ಕಡಬ,ಲಕ್ಷ್ಮೀಶ ಸುಳ್ಯ,ಪ್ರಣಮ್ ಸುಬ್ರಹ್ಮಣ್ಯ, ವಸಂತ್ ಕಲ್ಮ ಡ್ಕ ಈ ಚಲನ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಲನಚಿತ್ರ ವು ಮಂಡೆಕೋಲಿನ ಕೃಷ್ಣ ಹೆಬ್ಬಾರ್ ಅವರ ಮನೆಯಲ್ಲಿ ಚಿತ್ರೀಕರಣಗೊಂಡಿದ್ದು ಹಾಗೂ ಸುಳ್ಯ, ಸುಬ್ರಹ್ಮಣ್ಯ, ಯೆನೇಕಲ್ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿತ್ತು.

Related posts

ಸುಳ್ಯ: ಚಂದ್ರಯಾನ -3 ಯಶಸ್ಸಿಗೆ ಅಜ್ಜಾವರ ಮಹಿಷಮರ್ದಿನಿ ದೇವಳದಲ್ಲಿ ಪ್ರಾರ್ಥನೆ

ಸಂಪಾಜೆಯ ನಿವೃತ್ತ ಪ್ರಾಂಶುಪಾಲರ ಮನೆಯಿಂದ 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕದ್ದ ಕಳ್ಳರು..! ಯಾರೂ ಇಲ್ಲದ ವೇಳೆ ಮನೆ ಬಾಗಿಲನ್ನೇ ಮುರಿದು ನುಗ್ಗಿ ದೋಚಿ ಪರಾರಿ..! ವಿಡಿಯೋ ವೀಕ್ಷಿಸಿ

ನಟಿ ಶಿಲ್ಪಾ ಶೆಟ್ಟಿಗೆ ಕೋಟ್ಯಾಂತರ ರೂ. ಆಸ್ತಿ ವರ್ಗಾಯಿಸಿದ ಪತಿ ರಾಜ್ ಕುಂದ್ರಾ