ಕರಾವಳಿಭಕ್ತಿಭಾವಸುಳ್ಯ

ಸುಳ್ಯ:ಚೆನ್ನಕೇಶವ ದೇವರ ವೈಭವದ ರಥೋತ್ಸವ,ಸಂಭ್ರಮಕ್ಕೆ ಸಾಕ್ಷಿಯಾದ ಸಾವಿರಾರು ಭಕ್ತರು

469

ನ್ಯೂಸ್ ನಾಟೌಟ್ : ಸುಳ್ಯ ಪೇಟೆಯಲ್ಲಿ ಎಲ್ಲಿ ನೋಡಿದರೂ ಸಂಭ್ರಮ,ಸಡಗರ.ನಗರದೆಲ್ಲೆಡೆ ಬಂಟಿಂಗ್ಸ್, ಹೂಗಳಿಂದ ಶೃಂಗಾರಗೊಂಡ ಚೆನ್ನಕೇಶವ ದೇವಸ್ಥಾನ.ಈ ವೈಭವಕ್ಕೆ ಸಾಕ್ಷಿಯಾದ ಸಾವಿರಾರು ಸಂಖ್ಯೆಯ ಭಕ್ತರು. ಹೌದು,ಇತಿಹಾಸ ಪ್ರಸಿದ್ದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವೈಭವದಿಂದ ಜಾತ್ರೋತ್ಸವ ಕಾರ್ಯಕ್ರಮಗಳು ನಡೆಯುತ್ತಿದೆ. ವಾರ್ಷಿಕ ಜಾತ್ರೋತ್ಸವ ಅಂಗವಾಗಿ ನಿನ್ನೆ ತಡರಾತ್ರಿ ಶ್ರೀ ಚೆನ್ನಕೇಶವ ದೇವರ ರಥೋತ್ಸವ ಅದ್ದೂರಿಯಿಂದ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದು,ರಥೋತ್ಸವ ನೋಡಿ ಕಣ್ತುಂಬಿಕೊಂಡರು.

ರಥವು ಭಕ್ತ ಜನ ಸಾಗರದ ಮಧ್ಯೆ ಬರುತ್ತಿದ್ದಂತೆಯೇ ಭಕ್ತಾದಿಗಳು ಜಯಘೋಷ,ಮಂತ್ರಘೋಷವನ್ನು ಹಾಕುತ್ತಾ ಹೆಜ್ಜೆ ಹಾಕಿದರು. ದೇವಸ್ಥಾನಕ್ಕೆ ಕಲ್ಕುಡ ಭಂಡಾರ ಆಗಮಿಸಿತು.ಕಲ್ಕುಡ ದೈವ ಮತ್ತು ಕಾನತ್ತಿಲ ದೈವದ ಕೋಲಗಳು ನಡೆದವು. ಇದರೊಂದಿಗೆ ದೇವಸ್ಥಾನದಲ್ಲಿ ವಿಶೇಷವಾಗಿ ಹೂಗಳಿಂದ ಶೃಂಗರಿಸಲಾಗಿತ್ತು.ದೇವರಿಗೆ ವಿಶೇಷ ಪೂಜೆ ನಡೆಯಿತು.ಉತ್ಸವ ಬಲಿ ನಡೆದ ನಂತರ ದೇವರನ್ನು ರಥದಲ್ಲಿ ಕುಳ್ಳಿರಿಸಲಾಯಿತು.

ಕಲ್ಕುಡ ದೈವ ಮತ್ತು ಕಾನತ್ತಿಲ ದೈವದ ಕೋಲಗಳು ರಥೋತ್ಸವದ ಜತೆಯಲ್ಲಿ ಸಾಗಿಬಂತು.ಚೆನ್ನಕೇಶವ ದೇವರಿಗೆ ವಿಶೇಷ ಪೂಜೆಯ ಬಳಿಕ ಪ್ರಸಾದ ವಿತರಣೆ ನಡೆಯಿತು.ಈ ಸಂಭ್ರಮದ ಕ್ಷಣವನ್ನು ಭಕ್ತ ಸಮೂಹ ಕಣ್ತುಂಬಿಕೊಂಡಿತು.  

See also  ಮಂಗಳೂರು: ಶ್ರೀ ಕೃಷ್ಣಜನ್ಮಾಷ್ಟಮಿಗೆ ಬರೋಬ್ಬರಿ ೮೮ ಖಾದ್ಯ ತಯಾರಿಸಿದ ಮಹಿಳೆ..!,ಅನಾರೋಗ್ಯದ ಮಧ್ಯೆಯೂ ಈ ಮಹಿಳೆ ಇಷ್ಟೊಂದು ಖಾದ್ಯಗಳನ್ನು ರೆಡಿ ಮಾಡಿದ್ದು ಹೇಗೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget