ಭಕ್ತಿಭಾವಸುಳ್ಯ

ಸುಳ್ಯ ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

ನ್ಯೂಸ್ ನಾಟೌಟ್ : ಇತಿಹಾಸ ಪ್ರಸಿದ್ಧ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವಕ್ಕೆ ದಿನಗಣನೆ ಶುರುವಾಗಿದೆ. ಇದಕ್ಕಾಗಿ ಗೊನೆ ಮುಹೂರ್ತ ಕಾರ್ಯಕ್ರಮ ಇಂದು ನಡೆಯಿತು.

ಚೆನ್ನಕೇಶವ ದೇವಸ್ಥಾನದಲ್ಲಿ ಜಾತ್ರೆಯು ಜನವರಿ 3 ರಿಂದ ಪ್ರಾರಂಭವಾಗಿ ಜನವರಿ 12 ರವರೆಗೆ ಅದ್ದೂರಿಯಿಂದ ನಡೆಯಲಿದೆ. ಗೊನೆ ಮುಹೂರ್ತ ಕಾರ್ಯಕ್ರಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ. ಕೆ.ವಿ ಚಿದಾನಂದ, ಸದಸ್ಯರಾದ ಲಿಂಗಪ್ಪ ಗೌಡ ಕೇರ್ಪಳ, ಎಂ ಮೀನಾಕ್ಷಿ ಗೌಡ, ಎ. ರಮೇಶ ಬೈಪಡಿತ್ತಾಯ, ಎನ್ ಜಯಪ್ರಕಾಶ್ ರೈ, ಹಾಗೂ ಕೃಪಾಶಂಕರ ತುದಿಯಡ್ಕ, ವೀರಕೇಸರಿ ಕರಣಿಕರು, ಮೋನಪ್ಪ ಗೌಡ ಕೆರೆಮೂಲೆ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.

Related posts

‘ನ್ಯೂಸ್ ನಾಟೌಟ್’ ಹೆಸರಲ್ಲಿ ‘ಸುಳ್ಳು ಸುದ್ದಿ’ ಹಬ್ಬಿಸುತ್ತಿರುವ ಕಿಡಿಗೇಡಿಗಳು..! ಸೂಕ್ತ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹುಷಾರ್..!

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಯುವ ರೆಡ್‌ಕ್ರಾಸ್ ಘಟಕದ ವಾರ್ಷಿಕ ಚಟುವಟಿಕೆ ಉದ್ಘಾಟನೆ

ಸುಳ್ಯ: ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಂಭ್ರಮದ ಓಣಂ ಆಚರಣೆ – “ARRPO 2k24”