ನ್ಯೂಸ್ ನಾಟೌಟ್: ಸಂಪಾಜೆ – ಸುಳ್ಯ ರಸ್ತೆಯಲ್ಲಿ ಕಾರಿನ ಕಿಟಕಿ, ಸನ್ ರೂಪ್ ನಿಂದ ತಲೆ ಹೊರಗೆ ಹಾಕಿ ನೇತಾಡಿಕೊಂಡು ಹುಚ್ಚಾಟ ಮೆರೆದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇದೀಗ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BNS ಆಕ್ಟ್ 281 IMV,184 ಸಕ್ಷನ್ ಅಡಿಯಲ್ಲಿ ಸುಮೋಟೊ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯುವಕರ ಪತ್ತೆಗೆ ಕಾರ್ಯಚರಣೆ ನಡೆಸಲಾಗಿದೆ. ಆದ್ರೆ, ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಯುವಕರು ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದಾರೆ.
View this post on Instagram
KA09 MG5880 ನಂಬರಿನ ಕ್ರೆಟಾ ಕಾರಿನಲ್ಲಿ ಒಟ್ಟು ಏಳು ಜನ ಪ್ರಯಾಣ ಮಾಡುತ್ತಿದ್ದರು. ಈ ಕಾರು ಅತೀ ವೇಗವಾಗಿ ಹೋಗುತ್ತಿರುವಾಗಲೇ ಸನ್ ರೂಫ್ ಮತ್ತು ಕಿಟಿಕಿಯಿಂದ ಹೊರಬಂದು ಡ್ಯಾನ್ಸ್ ಮಾಡುತ್ತಾ ಪುಂಡಾಟ ಮಾಡಿದ್ದಾರೆ. ಇದನ್ನು ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ವಾಹನ ಸವಾರರು ವಿಡಿಯೋ ಮಾಡಿದ್ದು, ವಿಡಿಯೋ ಫುಲ್ ವೈರಲ್ ಆಗಿದೆ.