ಕ್ರೈಂ

ಸುಳ್ಯ: ನೋಡನೋಡುತ್ತಲೇ ಧಗ..ಧಗ ಹೊತ್ತಿ ಉರಿದ ವ್ಯಾಗನರ್ ಕಾರು

237
Spread the love

ಸುಳ್ಯ: ಇಲ್ಲಿನ ಅಜ್ಜಾವರ ಗ್ರಾಮದ ಮಾವಿನಪಳ್ಳ ಎಂಬಲ್ಲಿ ವ್ಯಾಗನರ್ ಕಾರೊಂದು ಹೊತ್ತಿ ಉರಿದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಭುವನ್ ಅತ್ಯಾಡಿಯವರು ಚಲಾಯಿಸುತ್ತಿದ್ದ ವ್ಯಾಗನರ್ ಕಾರಿನೊಳಗೆ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಏನಿದು ಘಟನೆ?

ಭುವನ್ ರವರು ರಾತ್ರಿ ಕಾರ್ಯಕ್ರಮವೊಂದಕ್ಕೆ ಹೋಗಲು ಮನೆಯಿಂದ ಹೊರಟು ಮಾವಿನಪಳ್ಳ ರಸ್ತೆಯಲ್ಲಿ ಬರುತ್ತಿದ್ದಾಗ ಕಾರಿನ ಬೋನೆಟ್ ನಿಂದ ಹೊಗೆ ಬರಲಾರಂಭಿಸಿತು. ಇದನ್ನು ಗಮನಿಸಿದ ಭುವನ್ ಕಾರನ್ನು ಬದಿಗೆ ಸರಿಸಿದರು. ಆ ವೇಳೆಗೆ ಕಾರ್ ಏಕಾಏಕಿ ಲಾಕ್ ಆಯಿತು. ಎದುರು ಬೆಂಕಿ ಹೊತ್ತಿಕೊಂಡಿತು. ಭುವನ್ ಕಷ್ಟಪಟ್ಟು ಕಾರಿನ ಡೋರ್ ತೆರೆದುಹೊರಗಿಳಿದರು. ಅಲ್ಲೇ ರಸ್ತೆ ಬದಿಯಲ್ಲಿದ್ದ ಮನೆಯವರಿಗೆ ವಿಷಯ ತಿಳಿಸಿದರು. ಅವರು ಬಂದು ನೀರನ್ನು ಹಾಕಿ ದೊಡ್ಡ ಅನಾಹುತವನ್ನು ತಪ್ಪಿಸಿದರಾದರೂ ಕಾರಿನ ಇಂಜಿನ್ ಸಂಪೂರ್ಣ ಉರಿದಿದೆಯೆಂದು ತಿಳಿದು ಬಂದಿದೆ.

See also  ಖ್ಯಾತ ಯಕ್ಷಗಾನ ಕಲಾವಿದನ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು
  Ad Widget   Ad Widget   Ad Widget