ನ್ಯೂಸ್ ನಾಟೌಟ್: ಸುಳ್ಯದ ಶ್ರೀ ರಾಮ ಪೇಟೆಯ ನ್ಯೂಸ್ ನಾಟೌಟ್ ಕಚೇರಿ ಎದುರು ಇಕೊ ಸ್ಪೋರ್ಟ್ ಕಾರು ಮತ್ತು ಟಿಟಿ ವಾಹನ ನಡುವೆ ಅಪಘಾತ ಸಂಭವಿಸಿದೆ. ಇಕೊ ಕಾರ್ ಹಾಗೂ ಟಿಟಿ ವಾಹನ ಜಖಂಗೊಂಡಿದೆ. ಅಪಘಾತದಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಕಾರು ಮತ್ತು ಟಿಟಿ ಚಾಲಕರ ನಡುವೆ ಪರಸ್ಪರ ವಾಗ್ವಾದ ನಡೆದಿದೆ. ಇಬ್ಬರು ಕೂಡ ಪೊಲೀಸ್ ದೂರು ದಾಖಲಿಸುವುದಕ್ಕೆ ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ. ಟಿಟಿ ವಾಹನದಲ್ಲಿದ್ದವರು ಸುಬ್ರಹ್ಮಣ್ಯಕ್ಕೆ ಹೋಗಿ ವಾಪಸ್ ಕೇರಳಕ್ಕೆ ತೆರಳುತ್ತಿದ್ದರು.