ಕರಾವಳಿ

ಸುಳ್ಯ: ಫಾಸ್ಟ್‌ ಫುಡ್ ಅಂಗಡಿಗೆ ನುಗ್ಗಿದ ಬೋಲೆರೋ ಕಾರು

368

ನ್ಯೂಸ್ ನಾಟೌಟ್ : ಸುಳ್ಯದ ಫಾಸ್ಟ್ ಫುಡ್ ಅಂಗಡಿಗೆ ಬೋಲೆರೋ ವಾಹನ ನುಗ್ಗಿದ ಘಟನೆ ವರದಿಯಾಗಿದೆ.

ಡಿಕ್ಕಿಯ ರಭಸಕ್ಕೆ ಅಂಗಡಿಯ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಶನಿವಾರ ಸುಳ್ಯ ಕುರುಂಜಿಭಾಗ್ ಕೆವಿಜಿ ಆಯುರ್ವೇದಿಕ್ ಆಸ್ಪತ್ರೆ ಬಳಿಯ ತಿರುವಿನಲ್ಲಿ ಫಾಸ್ಟ್ ಫುಡ್ ಗೂಡಂಗಡಿಗೆ ವಿವೇಕಾನಂದ ಸರ್ಕಲ್ ಬಳಿಯಿಂದ ಬರುತ್ತಿದ್ದ ಬೊಲೆರೊ ವಾಹನ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕ ಗಾಂಧಿನಗರ ನಿವಾಸಿ ಪ್ರಸಾದ್ ಎಂಬುವವರು ಅನ್ನವನ್ನು ಬೇಯಿಸುತ್ತಿದ್ದರು. ಅವರ ಸ್ನೇಹಿತರೊಬ್ಬರು ಈ ಸಂದರ್ಭದಲ್ಲಿ ಅಂಗಡಿಯೊಳಗೆ ಇದ್ದರು. ಬೊಲೆರೋ ವಾಹನ ಬಂದು ಡಿಕ್ಕಿ ಹೊ ಡೆದ ರಭಸಕ್ಕೆ ಅನ್ನ ಬೇಯುತ್ತಿದ್ದ ಪಾತ್ರೆ ಪ್ರಸಾದ್ ರವರ ಮೇಲೆ ಬಿದ್ದಿದೆ. ಪರಿಣಾಮ ಮೈಯಲ್ಲಿ ಅಪಾರ ಸುಟ್ಟ ಗಾಯವಾಗಿದೆ. ಕಾಲು ಜಖಂಗೊಂ ಡು ಗಂಭೀರ ಸ್ಥಿತಿಯಲ್ಲಿದ್ದ ಕಾರ್ಮಿಕನನ್ನು ಸ್ಥಳೀಯರು ಕೆವಿಜಿ ಆಸ್ಪತ್ರೆಗೆ ದಾಖಲಿಸಿದರು.

See also  ಅರುಣ್‌ ಕುಮಾರ್‌ ಪುತ್ತಿಲ ವಿರುದ್ಧ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು
  Ad Widget   Ad Widget   Ad Widget   Ad Widget   Ad Widget   Ad Widget   Ad Widget