ನ್ಯೂಸ್ ನಾಟೌಟ್: ಕಂಟೈನರ್ ಲಾರಿಯೊಂದು ಸುಳ್ಯದ ಸರ್ಕಾರಿ ಬಸ್ ನಿಲ್ದಾಣದ ಬಳಿ ಇಂದು ಬೆಳ್ ಬೆಳಗ್ಗೆ ಪಲ್ಟಿಯಾಗಿದೆ.
ಚಾಲಕ ನಿದ್ರೆ ಮಂಪರಿನಲ್ಲಿ ಲಾರಿ ಚಾಲನೆ ಮಾಡಿಕೊಂಡು ಬಂದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ. ಸರ್ಕಾರಿ ನಿಲ್ದಾಣದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವಂತಹ ನಂದಿನಿ ಬೂತ್ ಗೆ ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ. ಬೆಳ್ ಬೆಳಗ್ಗೆ ಅಪಘಾತ ಆಗಿದ್ದರಿಂದ ರಸ್ತೆಯಲ್ಲಿ ಜನ ಸಂಖ್ಯೆ ಕೂಡ ಕಡಿಮೆ ಇತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.