ಕರಾವಳಿ

ಸುಳ್ಯ: ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ, 4 ನೇ ದಿನದ ಕಾರ್ಯಾಚರಣೆ ವೇಳೆ ಪೆರಾಜೆ ಬಳಿ ಸಿಕ್ಕಿದ ಶವ

244

ನ್ಯೂಸ್ ನಾಟೌಟ್: ಕಾಲು ಸಂಕದಿಂದ ಹೊಳೆಗೆ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.

ಪೆರಾಜೆಯ ನೆಡ್ಚಿಲ್ ಸಮೀಪದ ಕಣಿ ಎಂಬಲ್ಲಿ ಮೃತ ದೇಹ ಸಿಕ್ಕಿದೆ ಎಂದು ತಿಳಿದು ಬಂದಿದೆ. ಮೂರು ದಿವಸದಿಂದ ಕಾರ್ಯಾಚರಣೆ ಮಾಡುತ್ತಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ. ಇದೀಗ ನಾಲ್ಕನೇ ದಿವಸದ ಕಾರ್ಯಾಚರಣೆ ಬಳಿಕ ಮೃತದೇಹ ಪತ್ತೆಯಾಗಿದೆ.

ಅಗ್ನಿಶಾಮಕ ದಳ, ಎಸ್‌ಡಿಆಎರ್‌ ಎಫ್‌ ತಂಡ, ಅಗ್ನಿಶಾಮಕ ದಳ ಸುಳ್ಯ, ಸುಳ್ಯ ಪೊಲೀಸ್ ಠಾಣಾ ಸಿಬ್ಬಂದಿ, SKSSF ಅರಂತೋಡು ಕಲ್ಲುಗುಂಡಿ ವಿಖಾಯ ತಂಡ, ಕಂದಾಯ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್ ಸಿಬ್ಬಂದಿ, ಸುಳ್ಯ-ಪೆರಾಜೆಯ ಮುಳುಗು ತಜ್ಞರಿಂದ ಕಾರ್ಯಾಚರಣೆ ನಡೆದಿತ್ತು.

See also  ಬೆಳ್ತಂಗಡಿ: ಕೋಳಿ ನುಂಗಿದ ಅಪರೂಪದ ಹಾವು, ಫೋಟೋ ವೈರಲ್‌
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget