ಕರಾವಳಿಸುಳ್ಯ

ಸುಳ್ಯ: ಕೆವಿಜಿ ಡೆಂಟಲ್ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ, ಪ್ರತಿಯೊಬ್ಬರೂ ರಕ್ತದಾನ ಮಾಡಿ: ಡಾ| ಕೆ.ವಿ. ರೇಣುಕಾ ಪ್ರಸಾದ್ ಕರೆ

ನ್ಯೂಸ್ ನಾಟೌಟ್: “ಪ್ರತಿಯೊಬ್ಬರು ರಕ್ತದಾನ ಮಾಡಿ ಜೀವ ಉಳಿಸುವ ಪುಣ್ಯದ ಕಾರ್ಯದಲ್ಲಿ ಭಾಗಿಯಾಗಿ” ಎಂದು ಕೆವಿಜಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಾ| ಕೆ.ವಿ. ರೇಣುಕಾ ಪ್ರಸಾದ್ ತಿಳಿಸಿದ್ದಾರೆ.

ಕೆವಿಜಿ ಇಂಜಿನಿಯರಿಂಗ್‌ ಕಾಲೇಜು, ಕೆವಿಜಿ ಡೆಂಟಲ್ ಕಾಲೇಜು, ಕೆವಿಜಿ ಪಾಲಿಟೆಕ್ನಿಕ್, ಕೆವಿಜಿ ಐಟಿಐ ನಾಲ್ಕು ಸಂಸ್ಥೆಗಳ ಯೂತ್ ರೆಡ್ ಕ್ರಾಸ್ ವತಿಯಿಂದ ಸುಳ್ಯ ತಾಲೂಕು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ಉದ್ಘಾಟಿಸಿ ಮಾತನಾಡಿದರು. ಸುಮಾರು 300ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡುವ ಮೂಲಕ ಸುಳ್ಯದ ಮಟ್ಟಿಗೆ ರಕ್ತದಾನ ದಿನವನ್ನು ಸ್ಮರಣೀಯವಾಗಿಸಲಾಯಿತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸುಳ್ಯ ತಾಲೂಕಿನ ಸಭಾಪತಿ ಸುಧಾಕರ್ ರೈ ಮಾತನಾಡಿ, “ಜೂನ್ 14ರ ಸ್ಮರಣೀಯ ದಿನದಲ್ಲಿ ಇಷ್ಟೊಂದು ಜನ ರಕ್ತದಾನ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯ, ಸುಳ್ಯದ ಮಟ್ಟಿಗೆ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ” ಎಂದು ತಿಳಿಸಿದರು. ರೆಡ್‌ಕ್ರಾಸ್ ಸುಳ್ಯ ಘಟಕದ ಉಪಸಭಾಪತಿ ಕೆ.ಎಂ.ಮುಸ್ತಫ, ಪ್ರಧಾನ ಕಾರ್ಯದರ್ಶಿ ತಿಪ್ಪೇಶಪ್ಪ, ಸಿಇಒ ಯು.ಪಿ.ಉಜ್ವಲ್‌, ಕೆವಿಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸುರೇಶ್, ಕೆವಿಜಿ ಡೆಂಟಲ್ ಕಾಲೇಜಿನ ಪ್ರಾಂಶುಪಾಲೆ ಡಾ| ಮೋಕ್ಷ ನಾಯಕ್‌, ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಡಾ.ಜಯಪ್ರಕಾಶ್ , ಕೆವಿಜಿ ಐಟಿಐ ಕಾಲೇಜಿನ ಪ್ರಾಂಶುಪಾಲ ಚಿದಾನಂದ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Related posts

ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಹಲವು ಕಡೆ NIA ದಾಳಿ

ಅರಂಬೂರು: ಬಾಳೆ ತೋಟಕ್ಕೆ ನುಗ್ಗಿ ಕಾಡಾನೆ ದಾಂಧಲೆ

ಸುಳ್ಯ:ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ವಿಭಿನ್ನ ಕಾರ್ಯಕ್ರಮ,ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಿಶೇಷ ಶಿಬಿರ ಉದ್ಘಾಟನೆ