ನ್ಯೂಸ್ ನಾಟೌಟ್: ಸುಳ್ಯದ ಬಿಜೆಪಿಯೊಳಗೆ ಆಂತರಿಕ ಭಿನ್ನಮತದ ಬೆಂಕಿ ಹೊತ್ತಿಕೊಂಡಿದೆ. ಸುಳ್ಯ ಬಿಜೆಪಿ ಮಂಡಲ ಸಮಿತಿ ಹೊಸ ಅಧ್ಯಕ್ಷರ ನೇಮಕವಾಗಿರುವ ಬೆನ್ನಲ್ಲೇ ಇಂತಹದ್ದೊಂದು ವಿಚಾರ ಹೊರಬಿದ್ದಿದೆ. ಇದೀಗ ಪಕ್ಷದ ಪ್ರಮುಖರೆಲ್ಲ ಸೇರಿಕೊಂಡು ಸಭೆ ನಡೆಸುತ್ತಿದ್ದಾರೆ. ಮುಂದೆ ಇದು ಎಲ್ಲಿಗೆ ಹೋಗಿ ಮುಟ್ಟುತ್ತದೆ ಅನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಹಿಂದೆ ಮಂಡಲ ಸಮಿತಿಯಿಂದ ಯಾರ ಹೆಸರನ್ನು ಆಯ್ಕೆ ಮಾಡುವುದು ಎನ್ನುವುದರ ಕುರಿತು ಚರ್ಚೆ ನಡೆದಿತ್ತು. ಈ ಪ್ರಕಾರವಾಗಿ ಅಧ್ಯಕ್ಷ ಸ್ಥಾನಕ್ಕೆ ವಿನಯ್ ಮುಳುಗಾಡು ಹೆಸರನ್ನು ಜಿಲ್ಲಾ ಸಮಿತಿಗೆ ಶಿಫಾರಸು ಮಾಡಿ ಕಳುಹಿಸಲಾಗಿತ್ತು. ಆದರೆ ಪಟ್ಟಿಯಲ್ಲಿ ಇಲ್ಲದೆ ಇದ್ದ ವೆಂಕಟ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಹಲವರ ಕಣ್ಣು ಕೆಂಪಗಾಗುವುದಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಸಭೆ ನಡೆಸಲಾಗುತ್ತಿದ್ದು ವೆಂಕಟ್ ವಳಲಂಬೆಯವರನ್ನು ಬಿಜೆಪಿಯ ಸುಳ್ಯ ಮಂಡಲ ಅಧ್ಯಕ್ಷರನ್ನಾಗಿ ನೇಮಿಸಿದ ರೀತಿಯನ್ನು ವಿರೋಧಿಸಿರುವ ಸುಳ್ಯ ಮಂಡಲ ಬಿಜೆಪಿಯು ಈ ವ್ಯವಸ್ಥೆಯನ್ನು ಜಿಲ್ಲಾ ಸಮಿತಿಯವರು ಸರಿಪಡಿಸುವವರೆಗೆ ಪಕ್ಷದ ಚಟುವಟಿಕೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.