ಕರಾವಳಿರಾಜಕೀಯಸುಳ್ಯ

ಸುಳ್ಯ ಬಿಜೆಪಿ ಅಭ್ಯರ್ಥಿ ಕು. ಭಾಗೀರಥಿ ಮುರುಳ್ಯ ಉಮೇದುವಾರಿಕೆ ಸಲ್ಲಿಕೆ

ಸುಳ್ಯದ ಶ್ರೀರಾಮ್‌ ಪೇಟೆಯಿಂದ ಅದ್ಧೂರಿ ರೋಡ್‌ ಶೋ

ನ್ಯೂಸ್‌ನಾಟೌಟ್‌: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕು. ಭಾಗೀರಥಿ ಮುರುಳ್ಯ ಸುಳ್ಯದ ಶ್ರೀರಾಮ್‌ ಪೇಟೆಯಿಂದ ಅದ್ಧೂರಿಯಾಗಿ ರೋಡ್‌ ಶೋ ಮೂಲಕ ತೆರಳಿ ಸುಳ್ಯ ಮಿನಿ ವಿಧಾನಸೌಧ ದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ರೋಡ್‌ ಶೋಗೆ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಚಾಲನೆ ನೀಡಿದರು. ಸಚಿವ ಅಂಗಾರ, ವಿಧಾನಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸುಳ್ಯ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್‌ ಕಂಜಿಪಿಲಿ ಸೇರಿದಂತೆ ಬಿಜೆಪಿಯ ಪ್ರಮುಖರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತಂದರು. ರೋಡ್‌ ಶೋ ಪ್ರಯುಕ್ತ ಪುತ್ತೂರು ವಿಭಾಗದ ಡಿವೈಎಸ್‌ಪಿ ಡಾ. ವೀರಯ್ಯ ಹಿರೇಮಠ ಉಪಸ್ಥಿತಿಯಲ್ಲಿ ಸುಳ್ಯ ಪೇಟೆಯಾದ್ಯಂತ ಬಿಗಿ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು.

ಈ ಬಾರಿ ಸುಳ್ಯ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಸ್ಥಾನಕ್ಕೆ ಹೊಸ ಮುಖ ಪರಿಚಯವಾಗಿದ್ದು, ಭಾಗೀರಥಿ ಮುರುಳ್ಯ ಅವರಿಗೆ ಮಣೆ ಹಾಕಿದೆ. ಈ ಹಿನ್ನೆಲೆಯಲ್ಲಿ ಹಾಲಿ ಸಚಿವರು ಮತ್ತು ಹಾಲಿ ಶಾಸಕರಾದ ಎಸ್.ಅಂಗಾರ ಅವರಿಗೆ ಟಿಕೆಟ್ ಮಿಸ್ ಆಗಿತ್ತು. ಕರಾವಳಿ ಭಾಗದಲ್ಲಿ ಎಸ್‌ ಅಂಗಾರ ಅವರು ಪ್ರಮುಖರು ಎನಿಸಿಕೊಂಡಿದ್ದರು. ಅವರ ಜಾಗಕ್ಕೆ ಇದೀಗ ಮಹಿಳೆಯೊಬ್ಬರಿಗೆ ಬಿಜೆಪಿ ಅವಕಾಶ ನೀಡಿದೆ. ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಭಾಗೀರಥಿ ಮುರುಳ್ಯ ಅವರಿಗೆ ಸುಳ್ಯದಲ್ಲಿ ಟಿಕೆಟ್ ನೀಡಲಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳ ಪೈಕಿ ಸುಳ್ಯ ವಿಧಾನಸಭಾ ಚುನಾವಣೆಗೆ ಮಾತ್ರ ಹೊಸ ಮುಖವನ್ನು ಪರಿಚಯಿಸಲಾಗಿದೆ.

Related posts

ನವೀನ್‌ ಡಿ. ಪಡೀಲ್‌ಗೆ ಮಾತೃವಿಯೋಗ

ಮುಸ್ಲಿಂ ಯುವಕನ ಮೇಲೆ ಹಲ್ಲೆ ಪ್ರಕರಣ: ಮೂವರು ಪೊಲೀಸ್‌ ವಶಕ್ಕೆ

ಪುತ್ತೂರು:ಸ್ನಾನ ಮಾಡಲೆಂದು ಹೊಳೆಗಿಳಿದ ಯುವಕ,ನೀರಲ್ಲಿಯೇ ಹೃದಯಾಘಾತಗೊಂಡು ಇನ್ನಿಲ್ಲ..!