ಕ್ರೈಂ

ಸುಳ್ಯ: ರಿಕ್ಷಾ – ಬೈಕ್ ಡಿಕ್ಕಿ, ಬೈಕ್ ಸವಾರನಿಗೆ ಗಂಭೀರ ಗಾಯ

760

ಸುಳ್ಯ: ಸುಳ್ಯದ ಅಜ್ಜಾವರದಲ್ಲಿ ಬೈಕ್ -ರಿಕ್ಷಾ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.

ಅಜ್ಜಾವರ ರಸ್ತೆ ಕರಿಯ ಮೂಲೆ ಎಂಬಲ್ಲಿ ಅಜ್ಜಾವರದಿಂದ ಸುಳ್ಯದತ್ತ ಬರುತ್ತಿದ್ದಾಗ ಎರಡೂ ವಾಹನಗಳ ನಡುವೆ ಮುಖಾಮುಖಿ ಸಂಭವಿಸಿದೆ.ಘಟನೆಯಲ್ಲಿ ಐವರ್ನಾಡು ಮೂಲದ ಅಜ್ಜಾವರ ಮಸೀದಿಯ ಮದ್ರಾಸ ಅಧ್ಯಾಪಕ ಖಾಲಿದ್ ಅಕ್ರಮ್ ತರಗತಿ ಮುಗಿಸಿ ಮನೆಗೆ ಹೋಗತ್ತಿದ್ದ ಸಂದರ್ಭದಲ್ಲಿ ಉಬರಡ್ಕದ ಕುತ್ತಮಟ್ಟೆ ನಿವಾಸಿ ರಮೇಶ್ ಅನ್ನುವವರ ರಿಕ್ಷಾ ಗುದ್ದಿದ್ದರಿಂದ ಖಾಲಿದ್ ಅವರ ಕಾಲಿಗೆ ಗಂಭೀರ ಪೆಟ್ಟು ಬಿದ್ದಿದೆ. ತಕ್ಷಣ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿಂದ ಖಾಸಗಿ ಆಸ್ಪತರೆಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗಿದೆ.

See also  ಬೆಂಗಳೂರಿನಲ್ಲಿ ಬಾಲಕಿ ಮೇಲೆ ಜರ್ಮನ್ ಶೆಫರ್ಡ್ ನಾಯಿ ದಾಳಿ! ಈ ತಿಂಗಳು ಬೆಂಗಳೂರಿನಲ್ಲಿ ನಡೆದ ಮೂರನೇ ಭೀಕರ ನಾಯಿ ದಾಳಿ! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget