ಕ್ರೈಂ

ಸುಳ್ಯದ ಬೈಕ್ ಸವಾರ ಚಿಕಿತ್ಸೆ ಫಲಿಸದೆ ಸಾವು

ನ್ಯೂಸ್ ನಾಟೌಟ್: ಸುಳ್ಯದಲ್ಲಿ ಬೈಕ್ ಮತ್ತು ಕಾರು ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಎರಡು ವಾರಗಳ ಹಿಂದೆ ರಾತ್ರಿ ಶ್ರೀರಾಂಪೇಟೆಯ ಸರಕಾರಿ ಆಸ್ಪತ್ರೆ ಎದುರುಗಡೆ ಮೇನಾಲದ ವಿಷ್ಣುಪ್ರಸಾದ್ ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಮತ್ತು ಬೊಳುಗಲ್ಲಿನ ಯುವಕ ಚಲಾಯಿಸಿಕೊಂಡು ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿತ್ತು. ಡಿಕ್ಕಿಯ ರಭಸಕ್ಕೆ ವಿಷ್ಣುಪ್ರಸಾದ್ ಮೇನಾಲರವರ ಕೈಕಾಲು ತಲೆಗೆ ತೀವ್ರ ರೂಪದ ಗಾಯಗಳಾಗಿತ್ತು.   ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

Related posts

ಮುಗ್ಧ ಶಿಶುವನ್ನು ಪೊದೆಯಲ್ಲಿ ಎಸೆದದ್ದಾದ್ರು ಏಕೆ? ರಾತ್ರಿಯಿಡೀ ನರಳಿದ ಕಂದನ ಆಕ್ರಂದನ ಯಾರಿಗೂ ಕೇಳಲಿಲ್ಲವೇ? ಏನಿದು ಅಮಾನವೀಯ ಘಟನೆ?

ಕೈ ಕಾಲು ಕತ್ತರಿಸಿ ಬಿಜೆಪಿ ಕಾರ್ಯಕರ್ತೆಯ ಹತ್ಯೆ..! ಡ್ರಮ್‌ ನೊಳಗಿದ್ದ ಮೃತದೇಹ ಸಿಕ್ಕಿದ್ದೇಗೆ..?

ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ಆ.28 ರಂದು ರಾಜ್ಯ ಮಟ್ಟದ ‘ಚಲೋ ಬೆಳ್ತಂಗಡಿ’ ಮಹಾಧರಣಿ, ಬೆಳ್ತಂಗಡಿ ಧರಣಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರಿಗೆ ವಸಂತ್ ಬಂಗೇರ ಹೇಳಿದ್ದೇನು?