ಕರಾವಳಿ

ಸುಳ್ಯ: ಭಾರತೀಯ ಮಜ್ದೂರ್  ಸಂಘದ ನೂತನ ಕಾರ್ಯಾಲಯ ಉದ್ಘಾಟನೆ

ವರದಿ: ರಸಿಕ ಮುರುಳ್ಯ

ನ್ಯೂಸ್ ನಾಟೌಟ್: ಸುಳ್ಯ ತಾಲೂಕಿನಲ್ಲಿ  ಭಾರತೀಯ ಮಜ್ದೂರ್   ಸಂಘ ದ ನೂತನ ಕಾರ್ಯಾಲಯದ  ಉದ್ಘಾಟನೆ ಕಾರ್ಯಕ್ರಮ ಸೋಮವಾರ  ನಡೆಯಿತು. 

ಕರ್ನಾಟಕ ಸರಕಾರದ  ಮೀನುಗಾರಿಕೆ, ಬಂದರು ಮತ್ತು  ಒಳನಾಡು ಜಲಸಾರಿಗೆಯ ಮಾನ್ಯ ಸಚಿವ ಎಸ್ ಅಂಗಾರ ಭಾರತೀಯ ಮಜ್ದೂರ್  ಸಂಘದ  ನೂತನ ಕಾರ್ಯ ಸಂಸ್ಥೆಯ ಉದ್ಘಾಟನೆ ಮಾಡಿದರು.  ನ. 21 ಸೋಮವಾರದಂದು ಸುಳ್ಯದ ಸಿ.ಎ. ಬ್ಯಾಂಕ್ ನ  ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದ ಬಳಿಕ ಕಾರ್ಮಿಕರಿಗೆ ನೋಂದಾವಣೆ ಹಾಗೂ ಮಾಹಿತಿ ಕಾರ್ಯಗಾರ ನಡೆಯಿತು. ಬಳಿಕ ಮಾತನಾಡಿದ  ಅಂಗಾರ ಅವರು, ನಾವು ನಮ್ಮ ಕುಟುಂಬದವರ ಜೊತೆಗೆ ಯಾವ ರೀತಿ ಸಂಬಂಧ ಬೆಳೆಸಿಕೊಳ್ಳುತ್ತೇವೆಯೋ   ಅದೇ ರೀತಿ ನಮ್ಮ ಸಂಘ ಸಂಸ್ಥೆಗಳ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಳ್ಳಬೇಕು.  ಅನೇಕ ಸಂಘ ಸಂಸ್ಥೆಗಳು ಒಳ್ಳೆಯ ರೀತಿಯಿಂದ ಕೆಲಸ ಮಾಡುತ್ತಿದೆ . ಆದರೆ ಇನ್ನು ಕೆಲವು ಅಧಿಕಾರಿಗಳು  ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿಲ್ಲ ಕೇವಲ ಅಧಿಕಾರ ಅಪೇಕ್ಷೆ ಮೇರೆಗೆ ಕೆಲಸ  ಮಾಡುತ್ತಿದ್ದಾರೆ ಎಂದು ತಿಳಿಸಿದರು. ಕಾರ್ಮಿಕರಿಗೆ ಸರ್ಕಾರ  ಹಲವು ರೀತಿಯ ಸೌಲಭ್ಯಗಳನ್ನು  ಕೊಡುತ್ತಿದೆ. ಆದರೆ ಕೆಲವು ಸಂಘ ಸಂಸ್ಥೆಗಳು ಅವರಿಗೆ ಬರುವ ಸೌಲಭ್ಯಗಳನ್ನು  ದೌರ್ಬಳಕೆ ಮಾಡುತ್ತಿದ್ದಾರೆ.   ಆದರೆ ಈಗ ಭಾರತೀಯ ಮಜ್ದೂರ್   ಸಂಘ ದಲ್ಲಿ  ಕಾರ್ಮಿಕರಿಗೆ ಅವಕಾಶಗಳನ್ನು ನೀಡುತ್ತಿದೆ ಎಂದರು. ಅಲ್ಲದೆ ಇದೇ ಬರುವ 26 ರಂದು ಸುಳ್ಯದಲ್ಲಿ 2ನೇ ಬಾರಿಯ ಬೃಹತ್ ಉದ್ಯೋಗ ಮೇಳ ನಡೆಯಲಿದ್ದು ಇದಕ್ಕೆ 3,000ಕ್ಕೂ ಅಧಿಕ ಜನರು ಭಾಗಿಯಾಗಬೇಕೆಂದು ಯುವಕರಿಗೆ ಮನವಿ ಮಾಡಿದರು.

ಕರ್ನಾಟಕ ದಕ್ಷಿಣ ಪ್ರಾಂತದ ರಾಷ್ಟೀಯ ಸ್ವಯಂ  ಸೇವಕ ನ. ಸೀತರಾಮ , ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ ಕರ್ನಾಟಕ , ಭಾರತೀಯ  ಮಜ್ದೂರ್ ಸಂಘದ ಕಾರ್ಯದರ್ಶಿ, ಕರ್ನಾಟಕ ಉಪಾಧ್ಯಕ್ಷ ಜಯರಾಜ್ ಸಾಲ್ಯಾನ್, ಪದ್ಮಶ್ರೀ ಪುರಸ್ಕೃತ ಗರೀಶ್ ಭಾರದ್ವಜ್,  ಸುಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಅಧ್ಯಕ್ಷ  ಬಾಲಗೋಪಾಲ ಸೇರ್ಕಜೆ, ಸುಳ್ಯ ಭಾರತೀಯ ಮಜ್ದೂರ್ ಸೇವಾ ಟ್ರಸ್ಟ್ ನ ಅಧ್ಯಕ್ಷ ಗೋಪಾಲಕೃಷ್ಣ  ಭಟ್ , ದ.ಕ. ಜಿಲ್ಲೆಯ  ಭಾರತೀಯ ಮಜ್ದೂರ್ ಸಂಘ, ಮಾಜಿ ಜಿಲ್ಲೆಯ ಅಧ್ಯಕ್ಷ  ಭಾಸ್ಕರ್  ರಾವ್,  ದ.ಕ. ಜಿಲ್ಲೆಯ ಭಾರತೀಯ ಮಜ್ದೂರ್ ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ಸಿಎ ಬ್ಯಾಂಕ್ ನ ಆಡಳಿತ ಸಂಘ ಸದಸ್ಯರು, ಪದಾಧಿಕಾರಿಗಳು,  ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Related posts

ಶಿರಾಡಿಘಾಟ್‌ ನಲ್ಲಿ ಮತ್ತೆ ಗುಡ್ಡ ಕುಸಿತ..! ತೆರವಾಗಿದ್ದ ರಸ್ತೆ ಮತ್ತೆ ಬಂದ್, ಮಣ್ಣಿನಡಿ ಸಿಲುಕಿದ ಕಂಟೇನರ್..!

Spandana Vijay Raghavendra:ಮರೆಯಾಯ್ತು ಚಿನ್ನಾರಿ ಮುತ್ತನ ‘ಚಿನ್ನ’, ಪಂಚಭೂತಗಳಲ್ಲಿ ಲೀನ ,ಸ್ಪಂದನಾ ವಿಧಿ ವಿಧಾನ ಪೂರೈಸಿದ ಪತಿ ವಿಜಯ್ ರಾಘವೇಂದ್ರ,ಮಗ ಶೌರ್ಯ

ಸುಳ್ಯ: ಸಚಿವ ಎಸ್.ಅಂಗಾರ ಮಂಗಳೂರು ಆಸ್ಪತ್ರೆಗೆ ದಾಖಲು,ಚಿಕಿತ್ಸೆ