ಕರಾವಳಿ

ಸುವರ್ಣ ಸಂಭ್ರಮದ ಸನಿಹದಲ್ಲಿ ಸುಳ್ಯದ ಭಾರತ್‌ ಆಗ್ರೋ ಸರ್ವೀಸಸ್ & ‌ ಸಪ್ಲೈಸ್ ಸಂಸ್ಥೆ, 5 ದಶಕಗಳ ಹಾದಿಗೆ ನೆನಪುಗಳ ಸ್ಪರ್ಶ

ನ್ಯೂಸ್ ನಾಟೌಟ್: ಸುಳ್ಯದ ಭಾರತ್‌ ಆಗ್ರೋ ಸರ್ವೀಸಸ್ & ‌ ಸಪ್ಲೈಸ್ ಸುವರ್ಣ ಸಂಭ್ರಮದ ಸನಿಹದಲ್ಲಿದೆ. ಕಳೆದ ಹಲವಾರು ವರ್ಷಗಳಿಂದ ಜನಮನದ ಇಚ್ಛೆಗೆ ಅನುಗುಣವಾಗಿ ಸೇವೆ ಸಲ್ಲಿಸುತ್ತಿರುವ ಭಾರತ್ ಆಗ್ರೋ ಸುಳ್ಯ ತಾಲೂಕಿನ ಕೃಷಿಕರ ಜೀವನಾಡಿಯಾಗಿದೆ. ಮಾತ್ರವಲ್ಲ ನೀವೊಂದು ಹೊಸ ಮನೆ ಕಟ್ಟುತ್ತೀರಿ ಎಂದಾದರೆ ಸುಳ್ಯದ ಭಾರತ್‌ ಆಗ್ರೋ ಸರ್ವೀಸಸ್ & ‌ ಸಪ್ಲೈಸ್ ಸೇವೆ ಬೇಕೇ ಬೇಕು ಅನ್ನುವಷ್ಟರ ಮಟ್ಟಿಗೆ ಭಾರತ್ ಆಗ್ರೋ ಗ್ರಾಹಕರಿಗೆ ಹತ್ತಿರವಾಗಿದೆ. ಕಳೆದ ಐದು ದಶಕಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಸುಳ್ಯ ಭಾರತ್‌ ಆಗ್ರೋ ಸರ್ವೀಸಸ್ & ‌ ಸಪ್ಲೈಸ್ ಗ್ರಾಹಕರ ಜೊತೆಗಿನ ಸುದೀರ್ಘ ಪ್ರಯಾಣವನ್ನು ನೆನಪಿಸುವ ‘ಆಗ್ರೋ ಸುವರ್ಣ ಸಂಭ್ರಮ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಕಾರ್ಯಕ್ರಮವು ಸಂಸ್ಥೆಯ ಸಮೀಪದಲ್ಲಿರುವ ಚೆನ್ನಕೇಶವ ದೇವಸ್ಥಾನದ ಮುಂಭಾಗ ನಡೆಯಲಿದೆ. ಮಾ.7 ಗುರುವಾರ ಸಂಜೆ 3.30 ರಿಂದ ರಾತ್ರಿ 9ರವರೆಗೆ ವಿವಿಧ ಕಾರ್ಯಕ್ರಮಗಳು ಸಾಗಲಿದೆ.

ಅಂದು ಮಧ್ಯಾಹ್ನ 5ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಅಧ್ಯಕ್ಷ ಡಾ | ಕೆ.ವಿ ಚಿದಾನಂದ ವಹಿಸಲಿದ್ದಾರೆ. ಉದ್ಘಾಟನೆಯನ್ನು ಶಾಸಕಿ ಭಾಗೀರಥಿ ನೆರವೇರಿಸಲಿದ್ದಾರೆ. ಶುಭಾಶಂಸನೆಯನ್ನು ಶ್ರೀಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಡಾ. ಹರಪ್ರಸಾದ್ ಟಿ. ನಡೆಸಿಕೊಡಲಿದ್ದಾರೆ. ಲಯನ್ ಎಂ.ಬಿ ಸದಾಶಿವ ಆಗ್ರೋ ಸಾಧನೆಯ ಅವಲೋಕನವನ್ನು ನಡೆಸಲಿದ್ದಾರೆ. ಅತಿಥಿಗಳಾಗಿ ರೋಟರಿ ಕ್ಲಬ್ ಸುಳ್ಯ ಅಧ್ಯಕ್ಷ ರೊ| ಆನಂದ ಖಂಡಿಗ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಪೂರ್ವಾಧ್ಯಕ್ಷ ನಿತ್ಯಾನಂದ ಮುಂಡೋಡಿ ಆಗಮಿಸಲಿದ್ದಾರೆ.

ಇದೇ ವೇಳೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಆಗ್ರೋ ಗೌರವ ಸನ್ಮಾನದ ಮೂಲಕ ಅಭಿನಂದಿಸುವ ಕಾರ್ಯ ನಡೆಯಲಿದೆ. ಪದ್ಮಶ್ರೀ ಪುರಸ್ಕೃತ ತೂಗುಸೇತುವೆ ಸರದಾರ ರೊ| ಗಿರೀಶ್‌ ಭಾರಧ್ವಾಜ್, ಗ್ರೀನ್‌ ಹೀರೋ ಆಫ್‌ ಇಂಡಿಯಾ ಪ್ರಸಿದ್ಧ ಪರಿಸರ ತಜ್ಞ ಡಾ. ಆರ್‌.ಕೆ. ನಾಯರ್‌ ಗುಜರಾತ್‌, ಕಾವೇರಿ ಕಾಲೇಜು ಗೋಣಿಕೊಪ್ಪ ನಿವೃತ್ತ ಪ್ರಾಂಶುಪಾಲ ಎಂ. ಗೌರಿಶಂಕರ್‌ , ಹಿರಿಯ ಪ್ರಗತಿಪರ ಕೃಷಿಕ ಸುಬ್ರಾಯ ಭಟ್‌ ಮಾಪಲತೋಟ, ಹಿರಿಯ ಪ್ರಗತಿಪರ ಕೃಷಿಕ ಶಂಕರ್‌ ಪ್ರಸಾದ್‌ ರೈ ಸಂಪಾಜೆ ಯವರಿಗೆ ಸನ್ಮಾನ ನಡೆಯಲಿದೆ. ಮಧ್ಯಾಹ್ನ 3.30 ಕ್ಕೆ ಆಗ್ರೋ ಕೃಷಿ ಚಿಂತನ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗುಜರಾತ್ ಗ್ರೀನ್ ಹೀರೋ ಆಫ್ ಇಂಡಿಯಾ ಭಾರತದ ಪ್ರಸಿದ್ಧ ಪರಿಸರ ತಜ್ಞ ಡಾ| ಆರ್ .ಕೆ .ನಾಯರ್ ವಹಿಸಲಿದ್ದಾರೆ. ಸ್ವಯಂಚಾಲಿತ ನಿರಾವರಿ ವಿಧಾನದ ಬಗ್ಗೆ ಅನಂತರಾಮಕೃಷ್ಣ ಪೆರುವಾಯಿ, ಕನಿ‍ಷ್ಠ ನೀರು / ಅಡಿಕೆ ಕೃಷಿಯ ಬಗ್ಗೆ ಶ್ರೀ ಪ್ರವೀಣ ಕೇಶವ ಮೈರುಗ ,ಕುರುಡಪದವು ಹಾಗೂ ಟ್ಯಾಂಕ್ ಬಳಕೆ / ಮಳೆಕೊಯ್ದು ಬಗ್ಗ ಶ್ರೀ ಮುರಳೀಧರ ಭಟ್ ಬಂಗಾರಡ್ಡ ಮಾತನಾಡಲಿದ್ದಾರೆ.

ಸಂಜೆ 7 ಗಂಟೆಯಿಂದ ಆಗ್ರೋ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ ನೆರವೇರಲಿದೆ. ಎಸ್ .ಡಿ.ಎಂ ಶಿಕ್ಷಣ ಸಂಸ್ಥೆ ಉಜಿರೆ ಪ್ರಸ್ತುತಪಡಿಸುವ SDM ಸಾಂಸ್ಕೃತಿಕ ಕಲಾವೈಭವ 160 ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಸಂಭ್ರಮ ನಡೆಯಲಿದೆ. ಮೋಹಿನಿಯಾಟ್ಟಂ | ಸ್ಪಾನಿಶ್ ಪ್ಲೆಮೆಂಕೋ| ಭರತನಾಟ್ಯ | ಯಕ್ಷಗಾನ ಬ್ಯಾಲೆಟ್ |ಕಥಕ್ |ಶಿವತಾಂಡವ|ದಾಂಡಿಯಾ – ಗರ್ಭನೃತ್ಯ |ಸೆಮಿಕ್ಲಾಸಿಕಲ್ |ತೆಯ್ಯಂ ನರಸಿಂಹಾವತಾರ |ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮಗಳು ನಡೆಯಲಿದೆ. ಕಾರ್ಯಕ್ರಮ ಸಂಯೋಜನೆಯನ್ನು ಅನುಭವಿ ರಂಗಕಲಾವಿದ ಡಾ. ಜೀವನ್ ರಾಂ ಸುಳ್ಯ ನಡೆಸಿಕೊಡಲಿದ್ದಾರೆ. ಡಾ| ಆರ್.ಕೆ ನಾಯರ್ ಇವರಿಂದ ಪ್ರಕೃತಿ -ಯಂತ್ರ -ಬದುಕು ವಿಶೇಷ ಚಿಂತನೆ ನಡೆಯಲಿದೆ. ಈ ಕಾರ್ಯಕ್ರಮವನ್ನು ಮಹೇಶ್ ಪುಚ್ಚಪ್ಪಾಡಿ ಮತ್ತು ರಮೇಶ್ ದೇಲಂಪಾಡಿ ನಿರ್ವಹಿಸಲಿದ್ದಾರೆ. ಈ ಎಲ್ಲ ಕಾರ್ಯಕ್ರಮಕ್ಕೆ ಗ್ರಾಹಕರನ್ನು, ಕೃಷಿಕರನ್ನು, ಹಿತೈಷಿಗಳನ್ನು ರೊ|ರಾಮಚಂದ್ರ ಪಿ., ಮಂಜುಳಾ ರಾಮಚಂದ್ರ , ರೊ| ಸನತ್ ಪಿ.ಆರ್ – ಶ್ರೀಮತಿ ದಿವ್ಯ ಸನತ್ |ಮಾ|ಸಿದ್ಧಾರ್ಥ್ |ಕು| ಸನಿಕ ಹಾಗೂ ನೌಕರ ವೃಂದ ಸ್ವಾಗತಿಸಿದ್ದಾರೆ.

Related posts

ಆನೆಗುಂಡಿ: ಬೆಕ್ಕು ನುಂಗಿ ಒದ್ದಾಡುತ್ತಿದ್ದ ಹೆಬ್ಬಾವಿನ ದೇಹದೊಳಗೆ 11 ಏರ್‌ ಬುಲ್ಲೆಟ್ ಪತ್ತೆ..! ಹಲವು ವರ್ಷಗಳ ಹಿಂದೆ ಏರ್ ಗನ್ ನಿಂದ ಶೂಟ್ ಮಾಡಿರುವ ಶಂಕೆ

ಈ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ?ಕರಾವಳಿಯಲ್ಲಿ ಮತ್ತೊಂದು ಧರ್ಮದಂಗಲ್?

ಮಂಗಳೂರು:ಜಿಲ್ಲಾ ಪತ್ರಕರ್ತರ ಸಮ್ಮೇಳನ ಹಾಗೂ ಸಾಧನಾ ಸಂಭ್ರಮ,ಗಣ್ಯರಿಂದ ಪತ್ರಕರ್ತರು ಬರೆದ ಕೃತಿ ಅನಾವರಣ