ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಮನೆಯವರು ಮದುವೆ ತಯಾರಿಯಲ್ಲಿರುವಾಗಲೇ ಪ್ರೀತಿಸಿದ ಹುಡುಗನ ಜೊತೆ ಹೋದಳೇ ಯುವತಿ..? ಏನಿದು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ..?

258

ನ್ಯೂಸ್ ನಾಟೌಟ್: ಆಕೆ ವಿದ್ಯಾವಂತೆ. ಆದರೆ ಪ್ರೀತಿಯಲ್ಲಿ ಬಿದ್ದಿದ್ದಳು. ಈ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದಳು. ಆದರೆ ಮನೆಯವರು ಸದ್ದಿಲ್ಲದೆ ಮತ್ತೋರ್ವ ಹುಡುಗನ ಜೊತೆಗೆ ಮದುವೆಗೆ ತಯಾರಿ ನಡೆಸುತ್ತಿದ್ದಂತೆ ಆಕೆ ಮನೆಯಿಂದ ನಾಪತ್ತೆಯಾಗಿದ್ದಾಳೆ ಅನ್ನುವ ದೂರು ಸುಳ್ಯ ತಾಲೂಕಿನ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆಕೆ ಹೆಸರು ಜಯಶ್ರೀ, ಅವಳಿಗೆ 24 ವರ್ಷ. ಮಂಗಳೂರಿನ ಯೆಯ್ಯಾಡಿಯಲ್ಲಿರುವ ಕಂಪೆನಿಯೊಂದರಲ್ಲಿ ಎಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಳು.

ಪಿಜಿಯಲ್ಲಿ ಉಳಿದುಕೊಂಡಿದ್ದ ಈಕೆಗೆ ಹುಣಸೂರು ಮೂಲದ ಯುವಕನ ಜೊತೆ ಪ್ರೇಮಾಂಕುರವಾಗಿತ್ತು. ಈ ವಿಚಾರ ಮನೆಯವರಿಗೆ ತಿಳಿಯುತ್ತಿದ್ದಂತೆ ಆಕೆಯನ್ನು ಮನೆಗೆ ಕರೆದು ಹೆತ್ತವರು ಬುದ್ಧಿವಾದ ಹೇಳಿದ್ದರು. ಅಲ್ಲದೆ ಮುಂದೆ ಕೆಲಸಕ್ಕೆ ಹೋಗದಂತೆ ತಿಳಿಸಿದ್ದರು. ಇದರಂತೆ ಫೆಬ್ರವರಿ ೨೨ರಂದು ಈಕೆ ಸುಳ್ಯ ತಾಲೂಕಿನ ಮುರುಳ್ಯದ ಮನೆಯಲ್ಲಿದ್ದಳು. ಮನೆಯವರು ದೈವದ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿದ್ದ ಜಯಶ್ರೀ ಮನೆಯವರು ಹಿಂತಿರುಗಿ ಬಂದಾಗ ನಾಪತ್ತೆಯಾಗಿರುವುದು ತಿಳಿದು ಬಂದಿದೆ.

ಎಲ್ಲೆ ಹುಡುಕಾಡಿದರೂ ಆಕೆಯ ಸುಳಿವು ಮನೆಯವರಿಗೆ ಸಿಕ್ಕಿರಲಿಲ್ಲ. ಹೋಗುವಾಗ ಆಕೆ ಮನೆಯಲ್ಲಿದ್ದ ಆಕೆಯ ಮೊಬೈಲ್ ಅನ್ನು ತೆಗೆದುಕೊಂಡು ಹೋಗಿದ್ದಾಳೆ. ಸಿಮ್ ಅನ್ನು ಬಿಟ್ಟು ಹೋಗಿದ್ದಾಳೆ. ವೈಯಕ್ತಿಕ ದಾಖಲೆಗಳನ್ನು ಕೂಡ ತೆಗೆದುಕೊಂಡು ಹೋಗಿದ್ದಾಳೆ. ಈಕೆ ಪ್ರೀತಿಸಿದ ಯುವಕನ ಜೊತೆ ಹೋಗಿರಬಹುದು ಎಂಬ ಸಂಶಯದಲ್ಲಿ ಇದೀಗ ದೂರು ದಾಖಲಾಗಿದೆ.

See also  ಕಲ್ಲುಗುಂಡಿ : ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲಕ್ಕೆ ಪೂರ್ವ ತಯಾರಿ ಸಭೆ,ಆಮಂತ್ರಣ ಪತ್ರಿಕೆ ಬಿಡುಗಡೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget