ಕರಾವಳಿಕ್ರೀಡೆ/ಸಿನಿಮಾ

ಸುಳ್ಯ: ಬ್ಯಾಂಕ್ ಆಫ್ ಬರೋಡಾ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್, ರೋಚಕ ಫೈನಲ್ ನಲ್ಲಿ ಮುಗ್ಗರಿಸಿದ ಯೇನೆಪೋಯ ಯೂನಿವರ್ಸಿಟಿ

201

ನ್ಯೂಸ್ ನಾಟೌಟ್: ಸುಳ್ಯ ತಾಲೂಕು ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಕಬಡ್ಡಿ ಆಯೋಜನೆ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕೂಟದ ಚಾಂಪಿಯನ್ ಪಟ್ಟವನ್ನು ಬ್ಯಾಂಕ್ ಆಫ್ ಬರೋಡಾ ತಂಡ ಗೆದ್ದುಕೊಂಡಿತು. ಭಾನುವಾರ ರಾತ್ರಿ ನಡೆದ ಫೈನಲ್ ನಲ್ಲಿ ಯೇನೆಪೋಯ ಯೂನಿವರ್ಸಿಟಿ ತಂಡವನ್ನು ೩೧-೨೯ ಅಂಕದಿಂದ ರೋಚಕ ಸೆಣಸಾಟದಲ್ಲಿ ಸೋಲಿಸಿತು.

ಭಾನುವಾರ ತಡರಾತ್ರಿ ನಡೆದ ಫೈನಲ್ ಪಂದ್ಯ ಸಮಯ ಕಳೆಯುತ್ತಿದ್ದಂತೆ ರೋಚಕತೆಯತ್ತ ಹೊರಳಿತು. ಆರಂಭದ ಹಂತದಲ್ಲಿ ತಾರಾ ಆಟಗಾರರನ್ನು ಹೊಂದಿದ್ದ ಬ್ಯಾಂಕ್ ಆಫ್ ಬರೋಡಾ ತಂಡಕ್ಕೆ ಯೇನೆಪೋಯ ಯೂನಿವರ್ಸಿಟಿ ತಂಡ ಭಾರಿ ಹೊಡೆತ ನೀಡಿ ಮುನ್ನುಗ್ಗಿತು. ತಂಡದ ಪರ ಕೌಶಿಕ್ ಮಿಂಚಿನ ಆಟವನ್ನು ಪ್ರದರ್ಶಿಸಿದರು. ಆದರೆ ಕೊನೆಯ ಹಂತಗಳಲ್ಲಿ ಬ್ಯಾಂಕ್ ಆಫ್ ಬರೋಡಾ ಫಿನಿಕ್ಸ್ ನಂತೆ ಪುಟಿದೆದ್ದು ನಿಂತಿತು. ಕೊನೆಯ ಐದು ನಿಮಿಷ ಗೇಮ್ ಚೇಂಜರ್ ಎನಿಸಿಕೊಂಡಿತು. ಬ್ಯಾಂಕ್ ಆಫ್ ಬರೋಡಾ ಗೆದ್ದು ಬೀಗಿತು. ಚಾಂಪಿಯನ್ ತಂಡವು ರೂ.1 ಲಕ್ಷ ಹಾಗೂ ಟ್ರೋಫಿ ಪಡೆದುಕೊಂಡರೆ ರನ್ನರ್ ಅಪ್ ತಂಡವು ರೂ. 65 ಸಾವಿರ ಹಾಗೂ ಟ್ರೋಫಿ ಗೆದ್ದುಕೊಂಡಿತು. ಚಾಂಪಿಯನ್ ವಿನ್ನರ್ ಅಪ್ 2023 ರ ಪ್ರಶಸ್ತಿ ಯೇನೆಪೋಯ ತಂಡ 26 ಅಂಕ ಪಡೆದು ರನ್ನರ್ ಅಪ್ ಪ್ರಶಸ್ತಿ ರೂ.65 ಸಾವಿರ ಹಾಗೂ ಟ್ರೋಫಿ ಪಡೆದುಕೊಂಡಿತು. ತೃತೀಯ ಬಹುಮಾನ ರೂ.35 ಸಾವಿರ ಹಾಗೂ ಟ್ರೋಫಿ ಆಳ್ವಾಸ್ ಮೂಡುಬಿದಿರೆ, ಚತುರ್ಥ ಬಹುಮಾನ ರೂ.35 ಸಾವಿರ ಹಾಗೂ ಟ್ರೋಫಿಯನ್ನು ಸ್ವೀಕರಿಸಿತು. ಸಮಾರಂಭದಲ್ಲಿ ಅತಿಥಿಗಳು ಬಹುಮಾನ ವಿತರಿಸಿದರು. ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

See also  ಕಲ್ಲುಗುಂಡಿ ಚರ್ಚ್ ನಲ್ಲಿ ಕಳ್ಳತನ, ಹುಂಡಿ ಬೀಗ ಮುರಿದು ಹಣ ದೋಚಿದ ಕಳ್ಳ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget