ನ್ಯೂಸ್ ನಾಟೌಟ್: ಅಲ್-ಅಮೀನ್ ಯೂತ್ ಸೆಂಟರ್ ಹಾಗೂ S.B.S ಖುವ್ವತ್ತುಲ್ ಇಸ್ಲಾಂ ಮದರಸ, ಪೈಚಾರ್ ಜಂಟಿ ಆಶ್ರಯದಲ್ಲಿ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ ಕಾರ್ಯಕ್ರಮ ಜುಲೈ 27ರಂದು ಪೈಚಾರ್ ಮದರಸದ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಸುಳ್ಯ ಠಾಣೆಯ ಸಹಾಯ ಉಪನಿರೀಕ್ಷಕ ಸೋಮಯ್ಯ ನಾಯ್ಕ್ ಉದ್ಘಾಟಿಸಿದರು. ಶಮೀರ್ ಅಹ್ಮದ್ ನಹೀಮಿ ಖತೀಬ್, ಬದ್ರಿಯ ಜುಮಾ ಮಸೀದಿ, ಪೈಚಾರ್ ಪ್ರಾರ್ಥನೆಯೊಂದಿಗೆ ಪ್ರಾರಂಭಿಸಲಾಯಿತು. ಅಲ್-ಅಮೀನ್ ಯೂತ್ ಸೆಂಟರ್ ಪೈಚಾರ್ ಅಧ್ಯಕ್ಷ ಜ. ಅಬ್ದುಲ್ ಸತ್ತಾರ್ ಪಿ.ಎ. ಅಧ್ಯಕ್ಷತೆ ವಹಿಸಿದ್ದರು. ಜುಮ್ಮಾ ಮಸೀದಿ, ಜಾಲ್ಸೂರಿನ ಖತೀಬರಾದ ಮುನೀರ್ ಸಹದಿ ಅಲ್ ಅರ್ಷದಿ ಅವರು ಮಾದಕ ವ್ಯಸನದ ಹಾನಿಕಾರಕ ಪರಿಣಾಮಗಳ ಬಗ್ಗೆ ಮಾಹಿತಿ ನೀಡಿ ಯುವಕರು ಅದರಿಂದ ದೂರವಿರುವಂತೆ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಲೇಖಕ ಇಕ್ಬಾಲ್ ಬಾಳಿಲ ರಚಿಸಿರುವ “ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ” ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆ ಮಾಡಲಾಯಿತು. ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಸತೀಶ್, ಪೈಝಲ್ ಸಖಾಫಿ, ಸದರ್ ಮುಅಲ್ಲಿಮ್, ಖುವ್ವತ್ತುಲ್ ಇಸ್ಲಾಂ ಮದರಸ, ಪೈಚಾರ್, ಜ. ಮುಜೀಬ್ ಪೈಚಾರ್, ಸದಸ್ಯರು, ಗ್ರಾಮ ಪಂಚಾಯತ್ ಜಾಲ್ಲೂರು, ಹಾಜಿ ಇಬ್ರಾಹಿಂ ಪಿ, ಅಧ್ಯಕ್ಷರು, ಬದ್ರಿಯ ಜುಮಾ ಮಸೀದಿ, ಪೈಚಾರ್, ಜ. ಇಬ್ರಾಹಿಂ ಎಸ್ ಎ, ಮದರಸ ಉಸ್ತುವಾರಿ, QIM ಪೈಚಾರ್, ಮಾ. ಮಹಮ್ಮದ್ ನಿಫಾಲ್, ಅಧ್ಯಕ್ಷರು, SBS ಖುವ್ವತ್ತುಲ್ ಇಸ್ಲಾಂ ಮದರಸ, ಪೈಚಾರ್ ಹಾಗೂ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.