ಕ್ರೈಂ

ಸುಳ್ಯ: ಬಾಡಿಗೆಗೆಂದು ನಂಬಿಸಿ ಆಟೋ ರಿಕ್ಷಾ ಹತ್ತಿದ ವ್ಯಕ್ತಿ ಆಟೋವನ್ನೇ ಕದ್ದ..!

ಅಜ್ಜಾವರ: ಕೆಲವು ಸಲ ಸಿನಿಮಾದಲ್ಲಿ ನಡೆಯುವ ಕಾಲ್ಪನಿಕ ಸನ್ನಿವೇಶಗಳು ಕಾಕತಾಳೀಯ ಎಂಬಂತೆ ನಿಜ ಜೀವನದಲ್ಲೂ ಸಂಭವಿಸುವುದಿದೆ. ಅಂತಹುದೇ ಒಂದು ರೋಚಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಸುಳ್ಯದಿಂದ ರಿಕ್ಷಾವನ್ನು ಬಾಡಿಗೆಗೆಂದು ಕೊಂಡೊಯ್ದ ವ್ಯಕ್ತಿಯೊಬ್ಬ ಸಿನಿಮೀಯ ಶೈಲಿಯಲ್ಲಿ ಆಟೋವನ್ನು ಅಪಹರಿಸಿ ಈಗ ಪೊಲೀಸರ ಕೈಗೆ ಸಿಕ್ಕಿ ಕಂಬಿ ಎಣಿಸುತ್ತಿದ್ದಾನೆ.

ಏನಿದು ಘಟನೆ?

ಅಜ್ಜಾವರದಿಂದ ಆಟೋರಿಕ್ಷಾವೊಂದನ್ನು ಮಂಡೆಕೋಲಿಗೆ ಬಾಡಿಗೆಗೆಂದು ಅಪರಿಚಿತ ವ್ಯಕ್ತಿ ಕರೆದೊಯ್ದಿದ್ದ. ಆಟೋ ಅಡ್ಪಂಗಾಯದ ಬಳಿ ತಲುಪುತ್ತಿದ್ದಂತೆ ಆಟೋದಲ್ಲಿದ್ದ ವ್ಯಕ್ತಿ ಏಕಾಏಕಿ ಆಟೋ ಚಾಲಕ ಹುಸೈನ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾನೆ. ನಂತರ ಆಟೋ ಚಾಲಕನ ಬಳಿಯಲ್ಲಿದ್ದ ಮೊಬೈಲ್ ಮತ್ತು ಹಣವನ್ನು ಕಿತ್ತು ಆಟೋ ಸಮೇತ ಕೇರಳದ ಕಡೆಗೆ ಪರಾರಿಯಾಗಿದ್ದಾನೆ. ಘಟನೆ ತಿಳಿದ ಸ್ಥಳೀಯರು ಕೂಡಲೇ ಆದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ದೂರು ಸ್ವೀಕರಿಸಿದ ಆದೂರು ಪೊಲೀಸರು ದೇವರಡ್ಕ ಪುದಿಯಂಬಲಂ ಎಂಬಲ್ಲಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಆದೂರು ಠಾಣೆಯಲ್ಲಿರಿಸಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Related posts

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಕಾರು-ಸ್ಕೂಟಿ ಅಪಘಾತ, ಸ್ಕೂಟಿ ಸವಾರನಿಗೆ ಗಾಯ

97 ಸಾವಿರ ಭಾರತೀಯರನ್ನು ಬಂಧಿಸಿದ್ದೇಕೆ ಅಮೆರಿಕ..? 730 ಮಂದಿ ಅನಾಥ ಮಕ್ಕಳನ್ನೂ ಸೆರೆ ಹಿಡಿದಿದ್ಯಾಕೆ ದೊಡ್ಡಣ್ಣ? ಏನಿದು ಪ್ರಕರಣ?

ಮಂಗಳೂರು: ಮಾದಕ ವಸ್ತು ಸಾಗಾಟ; 230.4 ಗ್ರಾಂ ತೂಕದ ಚರಸ್, ಕಾರು ವಶಕ್ಕೆ , ಓರ್ವನ ಬಂಧನ