ಕರಾವಳಿ

ಸೇನೆಯಿಂದ ನಿವೃತ್ತರಾದ ಭಾಸ್ಕರ ಕಾರಿಂಜ ಹುಟ್ಟೂರಿಗೆ ಆಗಮನ, ಭವ್ಯ ಸ್ವಾಗತ

ಸುಳ್ಯ: ಕನಕಮಜಲು ಗ್ರಾಮದ ಭಾಸ್ಕರ ಕಾರಿಂಜರವರು ಅರೆಸೇನಾ ಪಡೆಯ ಸೆಂಟ್ರಲ್ ರಿಸರ್ವ್ ಪೋಲಿಸ್ ಫೋರ್ಸ್ ನಲ್ಲಿ ಸೇವೆ ಸಲ್ಲಿಸಿ ಡಿ. 1 ರಂದು ನಿವೃತ್ತರಾಗಿದ್ದು, ಡಿ. 5 ರಂದು ತನ್ನ ಹುಟ್ಟೂರು ಕನಕಮಜಲಿನ ಕಾರಿಂಜಕ್ಕೆ ಆಗಮಿಸಿದರು. ತರವಾಡು ದೈವಸ್ಥಾನದ ಆಶೀರ್ವಾದ ಪಡೆದ ನಂತರ ತನ್ನ ಮನೆಯಲ್ಲಿ ನಡೆದ  ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾದ ನಂತರ ಕಾರಿಂಜ ಕುಟುಂಬಸ್ಥರ ಪರವಾಗಿ  ಸನ್ಮಾನ ಕಾರ್ಯಕ್ರಮ ನಡೆಯಿತು.

ನಿವೃತ್ತ ಹಿರಿಯ ಶಿಕ್ಷಕ ಕೇಪು  ಸುಂದರ್ ಮಾಸ್ತರ್ ಅವರು ನಿವೃತ್ತ ಸೈನಿಕ ದಂಪತಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ನ. ಸೀತಾರಾಮ, ಕಾರಿಂಜ ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಕುಶಾಲಪ್ಪ ಕಾರಿಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರಿಂಜ ಬಾಲಕೃಷ್ಣ ಗೌಡ ದಂಪತಿಗಳು, ಲೋಲಾಕ್ಷ ಕಾರಿಂಜ, ಉಮೇಶ್ ಕಾರಿಂಜ, ಭಾಸ್ಕರ ಕಾರಿಂಜರ ಧರ್ಮಪತ್ನಿ ಶ್ರೀಮತಿ ಆರತಿ ಮತ್ತು ಮಕ್ಕಳು ಸೇರಿದಂತೆ ಕುಟುಂಬಸ್ಥರು ಬಂಧು ಮಿತ್ರರು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಸೀತಾರಾಮ ಬುಡ್ಲೆಗುತ್ತು ಸ್ವಾಗತಿಸಿ,  ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಜಯಪ್ರಸಾದ್ ಕಾರಿಂಜ ವಂದಿಸಿದರು. 

Related posts

ಕೊಕ್ಕಡ: ಸಂಶಯಾಸ್ಪದ ರೀತಿಯಲ್ಲಿ ಯುವಕ ಸಾವು, ಚುರುಕುಗೊಂಡ ಪೊಲೀಸ್ ತನಿಖೆ

ಸುಳ್ಯ ಮೂಲದ 83 ವರ್ಷದ ವೃದ್ಧ ಮಹಿಳೆಗೆ ಕೊರೊನಾ ಪಾಸಿಟಿವ್, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು‌ ಮತ್ತೊಂದು ಪ್ರಕರಣ ಪತ್ತೆ

ಜಿಮ್ ಡಬಲ್ಸ್‌ಗಳಿಂದಲೇ ಶಿವಲಿಂಗ, ಅಚ್ಚರಿ ಆದ್ರು ನಿಜ