ಕ್ರೈಂ

ಅರಂಬೂರು: ರಿಕ್ಷಾ, ಬೈಕ್ ಗೆ ಡಿಕ್ಕಿ ಹೊಡೆದು ಕಾರು ಚಾಲಕ ಪರಾರಿ

ಅರಂಬೂರು: ಅತಿಯಾದ ವೇಗದಿಂದ ಬಂದ ಕಾರೊಂದು ಸುಳ್ಯ ಸಮೀಪದ ಅರಂಬೂರಿನಲ್ಲಿ ಬೈಕ್ ಹಾಗೂ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಲು ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಅರಂಬೂರಿನ ಪಾಲಡ್ಕ ಎಂಬಲ್ಲಿ ಕಾರು ಗುದ್ದಿದ ರಭಸಕ್ಕೆ ರಿಕ್ಷಾ ಹಾಗೂ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಬೈಕ್ ಸವಾರ ಹಾಗೂ ರಿಕ್ಷಾದಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ನಿನ್ನೆ ಸಂಜೆ 3.30 ರ ಸುಮಾರಿಗೆ ಆಲೆಟ್ಟಿ ಗರ್ಗುಂಜದ ಸುಕುಮಾರ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಮಾರುತಿ ಕಾರು ಅರಂಬೂರು ಬಳಿಯ ಪಾಲಡ್ಕ ಎಂಬಲ್ಲಿ ನಿಂತಿದ್ದ ಸಚಿನ್ ಎಂಬವರ ಬೈಕ್ ಗೆ ಗುದ್ದಿದ ಪರಿಣಾಮವಾಗಿ ಬೈಕ್ ಜಖಂಗೊಂಡು ಸಚಿನ್ ಗಾಯಗೊಂಡರು. ಇಲ್ಲಿ ಗುದ್ದಿದ ಸುಕುಮಾರ ಎಂಬುವವರು ವೇಗವಾಗಿ ಕಾರು ಚಲಾಯಿಸಿಕೊಂಡು ಸುಳ್ಯದತ್ತ ಬಂದಿದ್ದಾರೆ. ಈ ವೇಳೆ ಕುಂಬಳಚೇರಿ ಕುಂದಲ್ಪಾಡಿ ಕಡೆಯಿಂದ ಸಾರಣೆ ಕೆಲಸ ಮುಗಿಸಿ ರಿಕ್ಷಾದಲ್ಲಿ ಹಿಂತಿರುಗುತ್ತಿದ್ದ ರವಿ ಕನಕಮಜಲು ಎಂಬವರ ರಿಕ್ಷಾಕ್ಕೆ ಗುದ್ದಿ ಆ ರಿಕ್ಷಾದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ.  ತಕ್ಷಣ ಊರವರು ಸೇರಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದರು. ಆದರೆ ಗುದ್ದಿದ ಕಾರನ್ನು ಸುಕುಮಾರ ಎಂಬವರು ನಿಲ್ಲಿಸದೆ ಆಲೆಟ್ಟಿ ಕೂರ್ನಡ್ಕ ಕಡೆಗೆ ಧಾವಿಸಿದರೆನ್ನಲಾಗಿದೆ. ವಿಷಯ ತಿಳಿದ ಪೊಲೀಸರು ಬೆನ್ನಟ್ಟಿ ಹೋಗಿ ಕೂರ್ನಡ್ಕದಲ್ಲಿ ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Related posts

ಸ್ವಚ್ಛ ಭಾರತ್ ಕಲ್ಪನೆಯನ್ನೇ ಮರೆತಿರುವ ಜನ..! ಸುಬ್ರಹ್ಮಣ್ಯ – ಜಾಲ್ಸೂರು ರಾಜ್ಯ ಹೆದ್ದಾರಿಯ ರಸ್ತೆ ಬದಿಯಲ್ಲಿ ಕಸವೋ..ಕಸ

ಬೈಕ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ , ವಿದ್ಯಾರ್ಥಿ ಸಾವು..! ಸಿಸಿಟಿವಿ ದೃಶ್ಯ ಇಲ್ಲಿದೆ

ಪ್ರೀತ್ಸೆ ಅಂತಾ ಪ್ರಾಣ ತಿಂದ ಪ್ರೇಮಿ..! ಕಾಲೇಜು ಕಟ್ಟಡದಿಂದ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ..!