ಕರಾವಳಿಕ್ರೈಂಸುಳ್ಯ

ಸುಳ್ಯ: ಆನೆಗುಂಡಿ ಚೆಡಾವಿನಲ್ಲಿ ಕಾರಿಗೆ ಲಾರಿ ಡಿಕ್ಕಿ, ಈಶ್ವರಮಂಗಲದ ಕುಟುಂಬ ಪಾರು

198

ನ್ಯೂಸ್ ನಾಟೌಟ್:  ಸುಳ್ಯ ಸಮೀಪದ ಆನೆಗುಂಡಿ ಚೆಡಾವಿನಲ್ಲಿ ಕಾರಿಗೆ ಲಾರಿಯೊಂದು ಡಿಕ್ಕಿ ಹೊಡೆದಿರುವ ಘಟನೆ ಇಂದು ಮಧ್ಯಾಹ್ನ (5.12.2023) ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ಈಶ್ವರಮಂಗಲ ನೆಟ್ಟಣಿಗೆ ಮುಡ್ನೂರು ಗ್ರಾಮದ ಸುಳ್ಯ ನಿವಾಸಿ ಬಶೀರ್ ಎಂಬವರು  ತಮ್ಮ ಹೆಂಡತಿ, ಅಕ್ಕ, ಅಕ್ಕನ ಮಗಳು ಹಾಗೂ ಇಬ್ಬರು ಮಕ್ಕಳೊಂದಿಗೆ ಸೈಯದ್ ಎಂಬವರ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಸುಳ್ಯ ಸಮೀಪದ ಕನಕಮಜಲು ಗ್ರಾಮದ ಆನೆಗುಂಡಿ ಇಳಿಜಾರಿನಲ್ಲಿ ಹೋಗುತ್ತಿರುವಾಗ ಲಾರಿ ಚಾಲಕನೊಬ್ಬ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು ಕಾರಿಗೆ ಗುದ್ದಿದ್ದಾನೆ. ಇದರಿಂದ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಲಾರಿ ಚಾಲಕ ರಘು ಎಂಬುವವನ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದು ಬಂದಿದೆ. ಸುಳ್ಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ಅ.ಕ್ರ: 133/2023 ಕಲಂ 279 ಐಪಿಸಿ  ಯಂತೆ ಪ್ರಕರಣ ದಾಖಲಾಗಿದೆ.

See also  ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಗೆ ನಾನು ಕಾರಣನಲ್ಲ: ದೈವದ ಮುಂದೆ ಮಾಜಿ ಸಚಿವರ ಪ್ರಾರ್ಥನೆ
  Ad Widget   Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget