ಕರಾವಳಿಕಾಸರಗೋಡುಸುಳ್ಯ

ಸುಳ್ಯ: ಇಬ್ಬರು ಪುರುಷರು, ಓರ್ವ ಮಹಿಳೆ ದಾರುಣ ಸಾವು!

352

ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಮಣ್ಣಿನಡಿಗೆ ಬಿದ್ದು ಸಂಭವಿಸಿದ ಮಹಾ ದುರಂತದಲ್ಲಿಶನಿವಾರ ಉತ್ತರ ಕರ್ನಾಟಕ ಮೂಲದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಮೃತ ಕಾರ್ಮಿಕರನ್ನು ಗದಗ ಜಿಲ್ಲೆಯ ಮುಂಡರಗಿಯ ಸೋಮಶೇಖರ ರೆಡ್ಡಿ (45) ಮತ್ತು ಪತ್ನಿ ಶಾಂತಾ (40) ಹಾಗೂ ಮತ್ತೋರ್ವ ಪುರುಷನ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಇದೀಗ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನಿರಂತರ ಶ್ರಮವಹಿಸಿ ಮೂರು ಮೃತ ದೇಹಗಳನ್ನು ಹೊರ ತೆಗೆಯಲಾಗಿದೆ. ರಕ್ಷಣಾ ಕಾರ್ಯಾಚರಣೆ ಸಂದರ್ಭ ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕುಮಾರ್‌ ಕಂದಡ್ಕ, ಸಚಿವ ಎಸ್. ಅಂಗಾರ, ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿದ್ದರು. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಅಲೆಟ್ಟಿ ರಸ್ತೆ ಸಮೀಪದ ಕಟ್ಟಡ ಹಿಂಬದಿಯಲ್ಲಿ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ಅಪಾಯಕಾರಿಯಾಗಿ ಗುಡ್ಡವನ್ನು ಅಗೆಯಲಾಗಿತ್ತು. ಅದರ ಅಡಿಭಾಗದಿಂದ ಪಿಲ್ಲರ್‌ ನಿರ್ಮಾಣ ಕೆಲಸ ನಡೆಯುತ್ತಿತ್ತು. ಆಗ ಕಟ್ಟಡದ ಹಿಂಬದಿಯ ದೊಡ್ಡ ಬರೆ ಜರಿದು ಕಾರ್ಮಿಕರ ಮೇಲೆ ಬಿದ್ದು ಅನಾಹುತ ಸಂಭವಿಸಿತ್ತು.

See also  ಕೊಕ್ಕಡದ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ
  Ad Widget     Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget