ಕರಾವಳಿ

ಸುಳ್ಯದ ಹುಡುಗರ “ಮೌನ ಮಾತಾದಾಗ”  ಬಿಡುಗಡೆ

ನ್ಯೂಸ್ ನಾಟೌಟ್ : ಸುಳ್ಯದ ಯುವಕನೊಬ್ಬ ನಿರ್ದೇಶಿಸಿ ನಿರ್ಮಾಣ ಮಾಡಿದ “ಮೌನ ಮಾತಾದಾಗ” ಕನ್ನಡ ಆಲ್ಬಂ ಸಾಂಗ್  ಬಿಡುಗಡೆ ಕಾರ್ಯಕ್ರಮವು ಜು.24 ರಂದು ಸುಳ್ಯದ ಪ್ರಥಮ ದರ್ಜೆ ಕಾಲೇಜಿನ ಸಭಾಭವನದಲ್ಲಿ ನಡೆಯಿತು.

ನಟ ಆರ್ಯನ್, ಕನ್ನಡ ಸಿನಿಮಾ ನಿರ್ದೇಶಕ ಗೌರಿ ನಾಗೇಶ್ ಕೃಷ್ಣ , ನಿರೂಪಕ ವಿಜೆ ವಿಖ್ಯಾತ್ ಬಾರ್ಪಣ , ಕಾಲೇಜಿನ ಪ್ರಾಂಶುಪಾಲ ಸತೀಶ್ ಕುಮಾರ್ ಕೊಯಿಂಗಾಜೆರವರು ಆಲ್ಬಂ ಸಾಂಗನ್ನು ಬಿಡುಗಡೆಗೊಳಿಸಿದರು. ಪ್ರಶಾಂತ್ ವಿಟ್ಲ  ಸಾಹಿತ್ಯ ರಚಿಸಿದ್ದಾರೆ. ಯುವ ಗಾಯಕ  ವಿಷ್ಣು ನಾಗ್ ಶೇಟ್ ಹಾಡಿದ್ದು ಕೀರ್ತನ್ ಶೆಟ್ಟಿ ಸುಳ್ಯ ನಿರ್ದೇಶಿಸಿದ್ದಾರೆ.  ಯಶ್ ಫೋಟೋಗ್ರಾಫಿ ಛಾಯಾಚಿತ್ರ ಗ್ರಾಹಕರಾಗಿ ಸಹಕರಿಸಿದ್ದಾರೆ. ಜೀವನ್ ಕೆರೆಮೂಲೆ ಹಾಗೂ ಗಿರೀಶ್ ರವರ ಸಂಕಲನದಲ್ಲಿ ಮೂಡಿ ಬಂದಿರುವ  ಆಲ್ಬಮ್ ಸಾಂಗ್ https://youtu.be/EaIuaYLZPNA ಈ ಲಿಂಕ್‌ನಲ್ಲಿ ವೀಕ್ಷಿಸಲು ಲಭ್ಯವಿದೆ.

Related posts

ಆಧುನಿಕ ಸುಳ್ಯದ ಭವ್ಯ ಶಿಲ್ಪಿ,ಎ.ಒ.ಎಲ್.ಇ. ಸ್ಥಾಪಕಾಧ್ಯಕ್ಷ ಡಾ.ಕುರುಂಜಿ ವೆಂಕಟ್ರಮಣ ಗೌಡರ ೯೪ನೇ ಜನ್ಮ ದಿನಾಚರಣೆ

ಉಡುಪಿ: ಪ್ರತಿಭಾನ್ವಿತ ನೃತ್ಯಪಟು ಚಿಕಿತ್ಸೆ ಫಲಿಸದೇ ದುರಂತ ಅಂತ್ಯ,ಆಗಿದ್ದೇನು?

ಅಂತರ್ ಕಾಲೇಜು “ಯುವ ಸಂಭ್ರಮ”: ಸುಳ್ಯ ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದ ಮುಡಿಗೆ ಪ್ರಶಸ್ತಿಗಳ ಗರಿ