Latestಸುಳ್ಯ

ಸುಳ್ಯ:ಬಡ ಕುಟುಂಬದ ಶೋಚನೀಯ ಪರಿಸ್ಥಿತಿಗೆ ಮರುಗಿದ ಎಒಎಲ್ ಇ ಪ್ರಧಾನ ಕಾರ್ಯದರ್ಶಿ, ಹೊನ್ನೆಕಡ್ಪು ಬಳಿಯ ಅಶಕ್ತರ ಮನೆ ನಿರ್ಮಿಸಲು ಸಹಾಯ ಹಸ್ತ ಚಾಚಿದ ಅಕ್ಷಯ್ ಕೆ.ಸಿ

944

ನ್ಯೂಸ್‌ ನಾಟೌಟ್: ಹೊನ್ನೆಕಡ್ಪು ಎಂಬಲ್ಲಿ ಅಶಕ್ತರಾಗಿರುವ ಸೀತಮ್ಮ ಎಂಬವರ ಮನೆಗೆ ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆಸಿಯವರು ಮೇ. 22ರಂದು ಭೇಟಿ ನೀಡಿದರು. ಸೀತಮ್ಮ ಕುಟುಂಬಕ್ಕೆ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮನೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಈ ಕಾರ್ಯಕ್ಕೆ ಅಕ್ಷಯ್ ಕೆ.ಸಿ ಯವರು ಸಹಾಯ ನೀಡುವ ಭರವಸೆ ನೀಡಿದ್ದಾರೆ.

ಈ ವೇಳೆ ಹೊನ್ನೆಕಡ್ಪು ಸೀತಮ್ಮ ಮನೆಯಯವರ ಶೋಚನೀಯ ಪರಿಸ್ಥಿತಿಯನ್ನು ಮನಗಂಡು ಈಗಾಗಲೇ ಪಂಚಾಂಗ ಕೆಲಸ ಆಗಿರುವ ಮನೆ ನಿರ್ಮಾಣ ಕಾರ್ಯಕ್ಕೆ ಕೈ ಜೋಡಿಸುವುದಾಗಿ ತಿಳಿಸಿದರು.

ಭೇಟಿಯ ಸಂದರ್ಭದಲ್ಲಿ ಮಿಥುನ್, ಸಾಯಿರಾಂ, ಭುವನ್, ಕೊರಗಪ್ಪ ನಾಯ್ಕ್ ಕುರುಂಬುಡೇಲು, ತೀರ್ಥರಾಮ ಗೌರಿಪುರಂ, ವಿಶ್ವನಾಥ ಮೋಟುಕಾನ, ಕೇಶವ ಗೌಡ ಹಾಗೂ ಮನೆಯವರಾದ ಸೀತಮ್ಮ, ಕು. ಚಿತ್ರಾವತಿ, ಕು. ಹರಿಣಿ ಉಪಸ್ಥಿತರಿದ್ದರು.

See also  ನಾಯಿಗಳು ಬೊಗಳಿ ಕಿರಿ-ಕಿರಿ ಮಾಡುತ್ತವೆ ಎಂದು ವಿಷ ಹಾಕಿ ಕೊಂದ ವ್ಯಕ್ತಿ..! 25ಕ್ಕೂ ಹೆಚ್ಚು ನಾಯಿಗಳು ಸಾವು..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget