ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ವಿದೇಶಕ್ಕೆ ಹೋಗುತ್ತೇನೆಂದು ಪೋಷಕರನ್ನು ನಂಬಿಸಿ ಏರ್ ಪೋರ್ಟ್ ಒಳಗೆ ಹೋಗಿ ನಾಟಕವಾಡಿದ ಮಗಳು..! ಪೋಷಕರು ಇತ್ತ ಮನೆಗೆ ಬರುತ್ತಿದ್ದಂತೆ ಅನ್ಯಕೋಮಿನ ಯುವಕನ ಜೊತೆ ಪರಾರಿ..?

184

ನ್ಯೂಸ್ ನಾಟೌಟ್: ಮಕ್ಕಳನ್ನು ಲಾಲನೆ ಪಾಲನೆ ಮಾಡಿ ಮುದ್ದಿನಿಂದ ಸಾಕಿದ ಹೆತ್ತವರಿಗೆ ಮಕ್ಕಳಾದವರು ನೋವು ಕೊಡಬಾರದು, ಆದರೆ ಇಲ್ಲೊಬ್ಬಳು ಮಗಳು ವಿದೇಶದಲ್ಲಿ ಕೆಲಸ ಸಿಕ್ಕಿದೆ ಪಾಸ್ ಪೋರ್ಟ್ , ವೀಸಾ ಆಗಿದೆ ಎಂದು ಹೆತ್ತವರನ್ನೇ ನಂಬಿಸಿ ಮೋಸ ಮಾಡಿ ಅನ್ಯಕೋಮಿನ ಯುವಕನ ಜೊತೆ ಪರಾರಿಯಾಗಿದ್ದಾಳೆಂದು ತಿಳಿದು ಬಂದಿದೆ.

ಈ ಘಟನೆ ನಡೆದಿರುವುದು ಸುಳ್ಯ ತಾಲೂಕಿನ ಕೊಲ್ಲಮೊಗ್ರದಲ್ಲಿ. ಆಕೆ ಜಸ್ಟ್ ಪಿಯುಸಿ ಪಾಸಾದ ಯುವತಿ, ಇನ್ನೂ ಟೀನೇಜ್. ಇತ್ತೀಚೆಗೆ ಆಕೆ ತನ್ನ ಪೋಷಕರಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದೆ. ಯುರೋಪ್ ನಲ್ಲಿ ಒಳ್ಳೆ ಉದ್ಯೋಗ , ಕೈ ತುಂಬಾ ಸಂಬಳ ಕೂಡ ಇದೆ. ನಾನು ಕೆಲಸಕ್ಕೆ ಸೇರಿಕೊಳ್ಳುತ್ತೇನೆ. ಪಾಸ್ ಪೋರ್ಟ್ ಕೂಡ ಆಗಿದೆ ಎಂದು ನಂಬಿಸಿದ್ದಳು. ಪಾಸ್ ಪೋರ್ಟ್ ಕೂಡ ರೆಡಿ ಮಾಡಿಕೊಂಡಿದ್ದಳು.

ಮಗಳ ಮಾತು ಕೇಳಿ ಮನೆಯವರು ಹಿರಿಹಿರಿ ಹಿಗ್ಗಿದ್ದಾರೆ. ಮಗಳಿಗೆ ವಿದೇಶದಲ್ಲಿ ಕೆಲಸ ಸಿಕ್ಕಿದ ಖುಷಿಯಲ್ಲಿಯೇ ಆಯಿತು ಹೋಗಿ ಬಾ ಅನ್ನುತ್ತಾ ಕಳುಹಿಸಿಕೊಟ್ಟಿದ್ದಾರೆ. ಸ್ವತಃ ಮನೆಯವರು ಆಕೆಯನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಳುಹಿಸಿ ಬಂದಿದ್ದಾರೆ. ಮಗಳು ವಿಮಾನ ನಿಲ್ದಾಣದೊಳಕ್ಕೆ ಹೋಗಿ ದೂರದಿಂದಲೇ ‘ಟಾಟಾ ಗುಡ್ ಬಾಯ್’ ಅಂತ ಹೇಳಿದ್ದಾಳೆ. ಮಗಳನ್ನ ಬಿಟ್ಟು ಮನೆಯವರು ಊರಿಗೆ ಬಂದಿದ್ದಾರೆ. ಈ ವೇಳೆ ‘ಹ್ಯಾಪಿ ಜರ್ನಿ ಡಿಯರ್, ಗೋ ಸೇಫ್, ಮಿಸ್ ಯೂ ಲಾಟ್’ ಅನ್ನುವ ಬರಹಗಳು ಕೂಡ ಮನೆಯವರ ವಾಟ್ಸಾಪ್ ವಾಲ್ ನಲ್ಲಿ ಬಿದ್ದಿದೆ.

ಹಾಗೆ ಬಂದವರು ಮಗಳಿಗೊಂದು ಫೋನ್ ಮಾಡುವ, ಕರೆ ಹೋಗುತ್ತದಾ ನೋಡುವಾ ಅಂತ ಕರೆ ಮಾಡಿದ್ದಾರೆ. ಈ ವೇಳೆ ಫೋನ್ ರಿಂಗ್ ಆಗಿದೆ. ಮನೆಯವರಿಗೆ ಈ ವೇಳೆ ಸ್ವಲ್ಪ ಡೌಟ್ ಶುರುವಾಗಿದೆ. ಗಗನದೆತ್ತದಲ್ಲಿ ಹಾರಾಡುತ್ತಿರುವ ವಿಮಾನದಲ್ಲಿ ರಿಂಗ್ ಆಗುವುದಕ್ಕೆ ಹೇಗೆ ಸಾಧ್ಯ? ಎಂದು. ಆಗಸ್ಟ್ 25ರಂದು ಈ ಘಟನೆ ನಡೆದಿದೆ. ಆ ನಂತರದ ಬೆಳವಣಿಗೆಯಲ್ಲಿ ಕೆಲವರು ಆಕೆಯನ್ನು ಧರ್ಮಸ್ಥಳದಲ್ಲಿ ಬಸ್ ನಲ್ಲಿ ನೋಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸದ್ಯ ಆಕೆ ಅನ್ಯ ಕೋಮಿನ ಯುವಕನ ಜೊತೆ ತೆರಳಿದ್ದಾಳೆ ಅನ್ನುವ ಸುದ್ದಿ ಹಬ್ಬಿದೆ. ಇದೀಗ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡುವುದಕ್ಕೆ ಬಂದಿದ್ದಾರೆ. ಆದರೆ ದೂರು ಇನ್ನೂ ಸ್ವೀಕಾರವಾಗಿಲ್ಲ, ಬೆಂಗಳೂರಿನಲ್ಲೇ ದೂರು ಕೊಡಬೇಕೆಂದು ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಪೊಲೀಸ್ ದೂರನ್ನು ಎಲ್ಲಿ ಬೇಕಾದರೂ ನೀಡಬಹುದು. ಆದರೆ ಪೊಲೀಸರು ಯಾಕೆ ಸ್ವೀಕರಿಸಿಲ್ಲ ಅನ್ನುವುದು ಜಿಜ್ಞಾಸೆಗೆ ಕಾರಣವಾಗಿದೆ.
ಸದ್ಯ ಈ ವಿಚಾರವನ್ನು ಕೆಲವು ಹಿಂದೂ ಸಂಘಟನೆಗಳು ಕೂಡ ಗಂಭೀರವಾಗಿ ತೆಗೆದುಕೊಂಡಿವೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

See also  ಕೆ.ವಿ.ಜಿ. ಕಾನೂನು ಮಹಾವಿದ್ಯಾಲಯದಲ್ಲಿ 74ನೇ ಗಣರಾಜ್ಯೋತ್ಸವ ದಿನಾಚರಣೆ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget