ಕ್ರೈಂಸುಳ್ಯ

ಸುಳ್ಯ: ಅಪಘಾತಕ್ಕೀಡಾಗಿ ನಿಂತಿದ್ದ ಅಗ್ನಿ ಶಾಮಕ ವಾಹನಕ್ಕೆ ಕೊನೆಗೂ ಸಿಕ್ಕಿತು ಮುಕ್ತಿ..! ಮೂರು ವರ್ಷಗಳ ನಂತರ ಆ ವಾಹನ ಗುಜುರಿ ಸೇರಿದ್ದೇಗೆ..?

284

ನ್ಯೂಸ್ ನಾಟೌಟ್: ಅಪಘಾತಕ್ಕೀಡಾಗಿ ಪುಡಿಪುಡಿಯಾಗಿ ನಿಂತಿದ್ದ ಸುಳ್ಯದಲ್ಲಿದ್ದ ಅಗ್ನಿ ಶಾಮಕ ವಾಹನಕ್ಕೆ ಕೊನೆಗೂ ಮುಕ್ತಿ ಸಿಕ್ಕಿದೆ. ಈ ಬಗ್ಗೆ ಹಲವು ಸಲ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದರೂ ಯಾರೂ ಕ್ಯಾರೆ ಅಂದಿರಲಿಲ್ಲ. ಆದರೆ ಇದೀಗ ಈ ವಾಹನವನ್ನು ತೆರವುಗೊಳಿಸುವ ಕಾರ್ಯ ನಡೆದಿರುವುದು ವಿಶೇಷ.

2020 ರಲ್ಲಿ ಸುಳ್ಯದ ಅಡ್ಕಾರ್ ಬಳಿ ಟೆಸ್ಟ್ ಡ್ರೈವ್‌ಗೆ ಕೊಂಡು ಬಂದಿದ್ದ ಅಗ್ನಿ ಶಾಮಕ ವಾಹನ ಅಪಘಾತಕ್ಕೀಡಾಗಿತ್ತು. ಅದರೊಳಗಿದ್ದವರು ಸಂಭವನೀಯ ದುರಂತದಿಂದ ಕ್ಷಣಾರ್ಧದಲ್ಲಿ ಪಾರಾಗಿದ್ದರು. ಆದರೆ ಆ ವಾಹವವನ್ನು ಅಗ್ನಿ ಶಾಮಕ ಕೇಂದ್ರದ ಬಳಿ ಇರಿಸಲಾಗಿತ್ತು.

ಆದರೆ ಅದನ್ನು ತೆರವುಗೊಳಿಸುವ ಕಾರ್ಯ ನಡೆದಿರಲಿಲ್ಲ. ಮೂರು ವರ್ಷಗಳ ನಂತರ ಇದೀಗ ಅದನ್ನು ಸ್ಕ್ರಾಪ್ ಗೆ ಕೊಂಡೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

See also  ಸಾಯಲು ಬೃಹತ್ ಸೇತುವೆ ಹತ್ತಿದವ ಬಿರಿಯಾನಿಗಾಗಿ ಕೆಳಗೆ ಬಂದ..! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget