ಕರಾವಳಿಕ್ರೈಂಸುಳ್ಯ

ಅಡ್ಕಾರು: ಹೆಂಡತಿಗೆ ಚೂರಿಯಿಂದ ಕುತ್ತಿ ಗಂಡ ಪರಾರಿ, ರಕ್ತ ಸೋರುತ್ತಲೇ ಆಸ್ಪತ್ರೆಗೆ ಧಾವಿಸಿದ ಮಹಿಳೆಗೆ ಆಗಿದ್ದೇನು..?

ನ್ಯೂಸ್ ನಾಟೌಟ್: ಹೆಂಡತಿಗೆ ಚೂರಿಯಿಂದ ಕುತ್ತಿ ಗಂಡ ಪರಾರಿಯಾಗಿರುವ ಘಟನೆ ಸುಳ್ಯದ ಅಡ್ಕಾರು ಸಮೀಪದಿಂದ ವರದಿಯಾಗಿದೆ.

ಸಂತ್ರಸ್ತ ಮಹಿಳೆಯನ್ನು ಅಶ್ವಿನಿ‌ ಎಂದು ಗುರುತಿಸಲಾಗಿದೆ. ಈಕೆಗೆ ಕುಡಿದು ಬಂದು ಪತಿ ಯಾವಾಗಲೂ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಎಂದಿನಂತೆ ತನ್ನ ತೂರಾಡುವ ಕುಡುಕ ಬುದ್ದಿಯಲ್ಲಿ ಬಂದ ಗಂಡ ಮನೆಯಲ್ಲಿ ತಗಾದೆ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಇಬ್ಬರ‌ ನಡುವೆ ಜಗಳವಾಗಿದೆ.

ಈ ವೇಳೆ ಸಿಟ್ಟಿಗೆದ್ದ ಪತಿರಾಯ ಆಕೆಗೆ ಹರಿತವಾದ ಚೂರಿಯಿಂದ ಕುತ್ತಿದ್ದಾನೆ. ನೆತ್ತರು ಹರಿಯುತ್ತಾ ಮಹಿಳೆ‌ ಮನೆಯಲ್ಲಿ ‌ಕುಸಿದು ಬೀಳುತ್ತಾಳೆ.

ರಕ್ತದ ‌ಮಡುವಿನಲ್ಲಿ ಬಿದ್ದ ಪತ್ನಿಯನ್ನು ನೋಡಿ‌ ಪತಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇತ್ತ ನೋವಿನಿಂದ ಬಿದ್ದಿದ್ದ ಪತ್ನಿ ಆಟೋ ಚಾಲಕರೊಬ್ಬರಿಗೆ ಫೋನ್ ಮಾಡಿ ಬರಲು ಹೇಳಿದ್ದಾಳೆ. ತಡ‌ಮಾಡದೆ ಆಟೋ ಚಾಲಕ ಮನೆಗೆ ಬಂದು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾನೆ.

ಈ‌ ಪ್ರಕರಣದ ಕುರಿತಂತೆ ಇದೀಗ ಸುಳ್ಯ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಇತ್ತ ನಾಪತ್ತೆಯಾಗಿರುವ ಪತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related posts

ಉಪ್ಪಿನಂಗಡಿ: ನೇತ್ರಾವತಿ ನದಿಗೆ ಹಾರಲು ಯತ್ನಿಸುತ್ತಿದ್ದ ಮಹಿಳೆಯ ಜೀವ ಉಳಿಸಿದ್ದೇಗೆ ಶ್ವಾನ..? ರಾತ್ರೋರಾತ್ರಿ ಮನೆ ಬಿಟ್ಟು 4 ಕಿ.ಮೀ ನಡೆದು ಬಂದಿದ್ದ ಮಹಿಳೆ..!

ಉಡುಪಿ: ಶಾಲೆ- ಕಾಲೇಜುಗಳ ರಜೆಯ ನಕಲಿ ಸುತ್ತೋಲೆ ವೈರಲ್..! ಇಲ್ಲಿದೆ ಸಂಪೂರ್ಣ ಮಾಹಿತಿ

ಆಕೆ ಧರಿಸಿದ ಬಿಕಿನಿ ಬರೋಬ್ಬರಿ 1.46 ಕೋಟಿ ರೂಪಾಯಿಗೆ ಹರಾಜು..! ಯಾರು ಆ ಖ್ಯಾತ ಹಾಲಿವುಡ್‌ ನಟಿ..?