ನ್ಯೂಸ್ ನಾಟೌಟ್: ಸುಳ್ಯದಲ್ಲೂ ದರ್ಶನ್ ತೂಗುದೀಪ ಅಪ್ಪಟ ಅಭಿಮಾನಿ ಜಗ್ಗೇಶ್ ಸಂಕೇಶ ಮತ್ತು ಸ್ನೇಹಿತರು ಸೇರಿ ಡಿ ಬಾಸ್ ಗಜಪಡೆ ಸಂಕೇಶ ಎಂಬ ಬಳಗದ ಮೂಲಕ ಚಿತ್ರ ನಟ ದರ್ಶನ್ ರ 48 ನೇ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿದ್ದಾರೆ.
ಆ ಪ್ರಯುಕ್ತ ಕುಕ್ಕುಜಡ್ಕ ಹಾಗೂ ಅಡ್ಕರ್ ಅಂಗನವಾಡಿ ಮಕ್ಕಳಿಗೆ ಪುಸ್ತಕ ಮತ್ತು ಪೆನ್ಸಿಲ್ ನೀಡಿ, ಸಿಹಿ ತಿಂಡಿ ಹಂಚಿ ಸಂಭ್ರಮಿಸಿದ್ದಾರೆ.
ಈ ವೇಳೆ ಅಂಗನವಾಡಿ ಶಿಕ್ಷಕಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಸುಳ್ಯ ಬಸ್ ಸ್ಟಾಂಡ್ ಬಳಿ ಹುಟ್ಟುಹಬ್ಬದ ಬ್ಯಾನರ್ ಅಳವಡಿಸಿ ಡಿ ಬಾಸ್ ಗಜಪಡೆ ಸಂಘಟನೆಯೊಂದಿಗೆ ಜಗ್ಗೇಶ್ ಸಂಕೇಶ ಮತ್ತು ವಿನೋದ್ ಪೈಲೂರು ವಿಶೇಷ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸಿದ್ದಾರೆ.
16 ಫೆಬ್ರವರಿಯಂದು ದರ್ಶನ್ ಹುಟ್ಟುಹಬ್ಬವನ್ನು ಈ ಬಾರಿ ಸರಳವಾಗಿ ಆಚರಿಸಿಕೊಂಡಿದ್ದಾರೆ.
ಸತೀಶ್ ಅಡ್ಕರ್, ಜಯಂತ್ ಕಾರ್ಯತಡ್ಕ, ಗಣೇಶ್ ಬಂಬಿಲ, ಲೋಹಿತ್ ನಡುಗಲ್ಲು, ಉದಯ್ ಅಡ್ಪಂಗಾಯ, ನವನೀತ್, ಮೋಕ್ಷಿತ್ ನೆಟ್ಟಾರು, ಇಂದ್ರೇಶ್, ಯಕ್ಷಿತ್ ಕಮಿಲ, ಕೀರ್ತನ್ ಸಂಕೇಶ ಹಾಗೂ ಮಹಿಳಾ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.